Asianet Suvarna News Asianet Suvarna News

ಗೆಲುವಲ್ಲಿ ಮರೆಯಾಯ್ತು ರೋಹಿತ್​​ ಶರ್ಮಾ ರೆಕಾರ್ಡ್

Rohit Sharmas record

ಕಾನ್ಪುರ(ಸೆ.27): ಐತಿಹಾಸಿಕ ಟೆಸ್ಟ್​​ನಲ್ಲಿ ಅಶ್ವಿನ್​​ ಮಾಡಿದ ದಾಖಲೆ ಎಲ್ಲರಿಗೂ ಗೊತ್ತಾಯ್ತು. ಆದರೆ, ರೋಹಿತ್​​ ಶರ್ಮಾ ಮಾಡಿದ ದಾಖಲೆ ಮಾತ್ರ ಮರೆಯಾಗಿ ಹೋಯ್ತು. 2ನೇ ಇನ್ನಿಂಗ್ಸ್​​​ನಲ್ಲಿ ಅಜೇಯ 68 ರನ್​​ ಸಿಡಿಸಿದ ಅವರು, ಅಪರೂಪದ ದಾಖಲೆಯೊಂದನ್ನ ನಿರ್ಮಾಣ ಮಾಡಿದ್ದಾರೆ. 

ಇದೀಗ ರೋಹಿತ್​​ ಶರ್ಮಾ ಅಚ್ಚರಿಯ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಭಾರತದ ಪರ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್​​ ಮಾದರಿಯಲ್ಲಿ ಒಂದು ಸಾವಿರ ರನ್​​ ಕಲೆ ಹಾಕಿದ್ದಾರೆ. 19ನೇ ಟೆಸ್ಟ್​​ನಲ್ಲಿ ಈ ಸಾಧನೆ ಮಾಡಿರೋ ಅವರು, ಕಿವೀಸ್​​ ವಿರುದ್ಧದ 2ನೇ ಇನ್ನಿಂಗ್ಸ್​​ನಲ್ಲಿ 19 ರನ್​​ ಮಾಡ್ತಿದ್ದಾಗೆಯೇ ಈ ಮೈಲಿಗಲ್ಲನ್ನು ಮುಟ್ಟಿದರು. 

ವಿಶೇಷ ಇರೋದು ಇದೊಂದರಲ್ಲಿಯೇ ಅಲ್ಲ. ಟೆಸ್ಟ್​​ನಲ್ಲಿ ಸಾವಿರ ರನ್​​ ಪೂರೈಸುವ ಮೂಲ್ಕ 3 ಮಾದರಿಯಲ್ಲೂ ಸಾವಿರ ರನ್​​ ಮಾಡಿದ ಆಟಗಾರ ಎನಿಸಿಕೊಂಡರು. ಟೆಸ್ಟ್​​, ಏಕದಿನ ಹಾಗೂ ಟಿ20 ಹೀಗೆ ಮೂರು ಮೂದರಿಯಲ್ಲಿಯೂ ಸಾವಿರ ರನ್​​ ಮಾಡಿದ ಭಾರತದ 4ನೇ ಆಟಗಾರ ಅನ್ನೋ ಹೆಗ್ಗಳಿಕೆ ಇದೀಗ ರೋಹಿತ್​​ ಪಾಲಾಗಿದೆ. ಶರ್ಮಾಗೂ ಮೊದಲು ಧೋನಿ, ಕೊಹ್ಲಿ ಹಾಗೂ ಯುವರಾಜ್​​ ಈ ದಾಖಲೆಯನ್ನು ಹೊಂದಿದ್ದಾರೆ. 

ಒಟ್ಟಾರೆ ರೋಹಿತ್​​ ಸಾಧನೆ ಹೀಗಿದೆ. 18 ಟೆಸ್ಟ್​ಗಳಿಂದ 1049 ರನ್​ ಬಾರಿಸಿದ್ದಾರೆ. 148 ಏಕದಿನ ಪಂದ್ಯಗಳಲ್ಲಿ 5008 ರನ್ ಕೂಡಿಹಾಕಿರುವ ರೋಹಿತ್​, 62 ಟಿ20ಯಲ್ಲಿ 1364 ರನ್​​​ ಹೊಡೆದಿದ್ದಾರೆ.

ಮೂರು ಮಾದರಿಯಲ್ಲಿ ಸಾವಿರ ರನ್​​ ಕಲೆ ಹಾಕಿರುವ ರೋಹಿತ್​​, ಮೂರು ಮಾದರಿಯಲ್ಲೂ ಸೆಂಚುರಿ ಮಾಡಿದ್ದಾರೆ. ಆ ಮೂಲ್ಕ ಸಾವಿರ ರನ್​​ ಜೊತೆಗೆ ಶತಕವನ್ನೂ ದಾಖಲಿಸಿರೋ ಏಕೈಕ ಆಟಗಾರ ಅನ್ನೋ ಹೆಗ್ಗಳಿಕೂ ಅವರಿಗೆ ಸಲ್ಲುತ್ತೆ. 

ಟೀಕೆಗಳ ನದುವೆಯೂ ಮೊದಲ ಟೆಸ್ಟ್​​​​ನ ಅಂತಿಮ 11ರಲ್ಲಿ ಸ್ಥಾನ ಪಡ್ಕೊಂಡಿದ್ದ ರೋಹಿತ್​​, ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತಹ ಪ್ರದರ್ಶನವನ್ನೇ ನೀಡಿದರು. ಮೊದಲ ಇನ್ನಿಂಗ್ಸ್​​ನಲ್ಲಿ 35 ರನ್​​ ಕಲೆ ಹಾಕಿದ್ದ ಅವರು, 2ನೇ ಇನ್ನಿಂಗ್ಸ್​​ನಲ್ಲಿ ಅಜೇಯ 68 ರನ್​​ ಸಿಡಿಸಿದರು. 

Latest Videos
Follow Us:
Download App:
  • android
  • ios