ಮುಂಬೈ[ಏ.30]: ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಬಾರಿಸಿದ ಸರದಾರ, ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ.
’ಹಿಟ್’ಮ್ಯಾನ್’ ಖ್ಯಾತಿಯ ರೋಹಿತ್’ಗೆ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಸೇರಿದಂತೆ ವಿವಿಧ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದಾರೆ. ಅದರಲ್ಲೂ ಪ್ರತಿ ಬಾರಿಯೂ ವಿಭಿನ್ನವಾಗಿ ಟ್ವೀಟ್ ಮಾಡುವ ಸೆಹ್ವಾಗ್, ’ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೋಸ್ಟರ್’ನಂತೆ ರೋಹಿತ್ ಚಿತ್ರ ಶೇರ್ ಮಾಡಿರುವ ವೀರೂ, ಟ್ಯಾಲೆಂಟ್ ಜಿಂದಾ ಹೈ ಎಂದು ಬರೆಯುವ ಮೂಲಕ ರೋಹಿತ್’ರನ್ನು ಕೊಂಡಾಡಿದ್ದಾರೆ.

2007ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ರೋಹಿತ್ ಇದುವರೆಗೆ 25 ಟೆಸ್ಟ್, 180 ಏಕದಿನ ಹಾಗೂ 79 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.