ಕೋಲ್ಕತಾ(ಆ.02): ರೋಹಿತ್ ಶರ್ಮಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಸುಭದ್ರ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಮೇಲ್ಪಂಕ್ತಿಯ ಆಟಗಾರರೆಲ್ಲ ಬೇಗನೆ ಪೆವಿಲಿಯನ್ ಸೇರಿ ಆತಂಕ ಮೂಡಿಸಿದ್ದರು. ಆದರೆ ವಿರಾಟ್ ಕೊಹ್ಲಿ(45), ರೋಹಿತ್ ಶರ್ಮಾ(82) ಅವರ ನೆರವಿನಿಂದ ಕಿವೀಸ್ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಯಿತು. ಮೂರನೇ ದಿನದಾಟದ ಮುಕ್ತಾಯಕ್ಕೆ ಭಾರತ 227/8 ರನ್ ಗಳಿಸಿದೆ. ಒಟ್ಟಾರೆಯಾಗೆ ಟೀಂ ಇಂಡಿಯಾ 339 ರನ್'ಗಳ ಮುನ್ನೆಡೆ ಪಡೆದುಕೊಂಡಿದೆ. ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ವೃದ್ದಿಮಾನ್ ಸಾಹ(39), ಭುವನೇಶ್ವರ್ ಕುಮಾರ್(8) ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂದು ಬೆಳಗ್ಗೆ 128/7 ರನ್'ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ ತಂಡ 204 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ಬಿರುಸಿನ ಬ್ಯಾಟ್ ಬೀಸಿದ ಜೀತನ್ ಪಟೇಲ್ 47 ರನ್'ಗಳಿಸಿದರು.
