ಲಂಡನ್(ಜು.22): ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಗರಿಷ್ಠ ಅಭಿಮಾನಿಗಳನ್ನ ಹೊಂದಿದೆ. ಈ ಎರಡು ತಂಡಗಳು ಸಾಂಪ್ರದಾಯಿಕ ಎದುರಾಳಿಗಳ ರೀತಿಯಲ್ಲೇ ಹೋರಾಟ ನಡೆಸಿದೆ. ಮುಂಬೈ ಹಾಗೂ ಚೆನ್ನೈ 3 ಬಾರಿ ಐಪಿಎಲ್ ಟ್ರೋಫಿ ಗೆಲ್ಲೋ ಮೂಲಕ ದಾಖಲೆ ಬರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿಯಿಂದಾಗಿ ಸಿಎಸ್‌ಕೆಗೆ ಅಪಾರ ಅಭಿಮಾನಿಗಳು ಇದ್ದಾರೆ. ಧೋನಿ ಪುತ್ರಿ ಝಿವಾ ಧೋನಿ ಕೂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ತಂಡಕ್ಕೆ ಬೆಂಬಲ ನೀಡಿದ್ದರು. ಈ ಬಾರಿ ಸಿಎಸ್‌ಕೆ ಐಪಿಎಲ್ ಟ್ರೋಫಿ ಗೆದ್ದ ಕ್ಷಣಗಳನ್ನ ಝಿವಾ ಧೋನಿ ಕೂಡ ಆನಂದಿಸಿದ್ದರು.

ಅಪ್ಪ ಎಂ ಎಸ್ ಧೋನಿ ತಂಡದ ಅಭಿಮಾನಿಯಾಗಿದ್ದ ಝಿವಾ ಧೋನಿ ಇದೀಗ ಮುಂಬೈ ಇಂಡಿಯನ್ಸ್ ಅಭಿಮಾನಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೋಡಿಯಿಂದ ಝಿವಾ ಇದೀಗ ಮುಂಬೈಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

 

;

 

ಇಂಗ್ಲೆಂಡ್ ಪ್ರವಾಸದ ವೇಳೆ ಝಿವಾ ಧೋನಿಗೆ ಮುಂಬೈಗೆ ಬೆಂಬಲ ವ್ಯಕ್ತಪಡಿಸುವಂತೆ ರೋಹಿತ್ ಶರ್ಮಾ ಹೇಳಿದ್ದಾರೆ. ತಕ್ಷಣವೇ ಝಿವಾ ಕಮಾನ್ ಮುಂಬೈ ಇಂಡಿಯನ್ಸ್ ಎಂದು ಹೇಳೋ ಮೂಲಕ ಮುಂಬೈ ತಂಡಕ್ಕೆ ಸಪೂರ್ಟ್ ಮಾಡಿದ್ದಾಳೆ. 

ಝಿವಾ ಬೆಂಬಲ ಸೂಚಿಸಿರೋ ವೀಡಿಯೋವನ್ನ ರೋಹಿತ್ ಶರ್ಮಾ ಟ್ವಿಟರ್‍‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈ ತಂಡದ ನೂತನ ಅಭಿಮಾನಿ ಎಂದು ರೋಹಿತ್ ಬರೆದುಕೊಂಡಿದ್ದಾರೆ.