ಈ ಸಂಬಂಧ ರೋಹಿತ್ ಮುಂದಿನ ವಾರ ಲಂಡನ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಾಗೆ ಮುಂದಿನ ವರ್ಷ ಫೆಬ್ರವರಿ 23ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ.
ಮುಂಬೈ(ನ.04): ಭಾರತದ ಬ್ಯಾಟ್ಸ್ಮನ್ ರೋಹಿತ್ ಶರ್ಮ, ಕಾಲಿನ ತೊಡೆ ಭಾಗದ ನೋವಿನಿಂದ ಬಳಲುತ್ತಿದ್ದು, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಿಂದ ವಂಚಿತರಾಗಲಿದ್ದಾರೆ.
ಈ ಸಂಬಂಧ ರೋಹಿತ್ ಮುಂದಿನ ವಾರ ಲಂಡನ್ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಾಗೆ ಮುಂದಿನ ವರ್ಷ ಫೆಬ್ರವರಿ 23ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ.
ಕಳೆದ ತಿಂಗಳು 29ರಂದು ವೈಜಾಗ್ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದ ವೇಳೆ ರೋಹಿತ್ ತೊಡೆಯ ಭಾಗದ ನೋವಿಗೆ ತುತ್ತಾಗಿದ್ದರು. ರೋಹಿತ್ ಒಮ್ಮೆ ಶಸಚಿಕಿತ್ಸೆಗೆ ಒಳಗಾದರೆ 10 ರಿಂದ 12 ವಾರಗಳ ಕಾಲ ವಿಶ್ರಾಂತಿಯ ಅವಶ್ಯಕತೆ ಇರಲಿದೆ.
