ಭಾರತ ಕ್ರಿಕೆಟ್ ತಂಡದ ಗೆಲುವಿನ ಸೀಕ್ರೆಟ್ ಬಿಚ್ಚಿಟ್ಟ ರೋಹಿತ್ ಶರ್ಮ

First Published 26, Feb 2018, 11:07 AM IST
Rohit Sharma reveals secret behind Team Indias stupendous success
Highlights

ಎಂತಹುದೇ ಪರಿಸ್ಥಿತಿ ಇದ್ದರೂ ಭಾರತ ತಂಡದ ಆಟಗಾರರು ಎಂದಿಗೂ ಎದೆಗುಂದುವುದಿಲ್ಲ. ಚುಟುಕು ಓವರ್‌ಗಳ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಪಡೆಯಲು ಪೂರ್ವ ನಿಯೋಜಿತ ಯೋಜನೆಗಳು ಅಗತ್ಯ ವಾಗಿವೆ. ಇದರಲ್ಲಿ ಆಕ್ರಮಣಾಕಾರಿ ಆಟ ಸೇರಿದಂತೆ ವಿವಿಧ ಯೋಜನೆಗಳು ಪಂದ್ಯದ ಗತಿಯನ್ನು ಒದಲಿಸಲಿವೆ. ಪವರ್ ಪ್ಲೇನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ನಾವು ಅಂದು ಕೊಂಡದ್ದನ್ನೇ ಸಾಧಿಸಿದ್ದೇವೆ ಎಂದು ಭಾರತ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಹೇಳಿದರು.

ನವದೆಹಲಿ : ಎಂತಹುದೇ ಪರಿಸ್ಥಿತಿ ಇದ್ದರೂ ಭಾರತ ತಂಡದ ಆಟಗಾರರು ಎಂದಿಗೂ ಎದೆಗುಂದುವುದಿಲ್ಲ. ಚುಟುಕು ಓವರ್‌ಗಳ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಪಡೆಯಲು ಪೂರ್ವ ನಿಯೋಜಿತ ಯೋಜನೆಗಳು ಅಗತ್ಯ ವಾಗಿವೆ. ಇದರಲ್ಲಿ ಆಕ್ರಮಣಾಕಾರಿ ಆಟ ಸೇರಿದಂತೆ ವಿವಿಧ ಯೋಜನೆಗಳು ಪಂದ್ಯದ ಗತಿಯನ್ನು ಒದಲಿಸಲಿವೆ. ಪವರ್ ಪ್ಲೇನಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡ ಹೇರುವ ಮೂಲಕ ನಾವು ಅಂದು ಕೊಂಡದ್ದನ್ನೇ ಸಾಧಿಸಿದ್ದೇವೆ ಎಂದು ಭಾರತ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ಹೇಳಿದರು.

‘ಸರಣಿಯುದ್ದಕ್ಕೂ ಆಕ್ರಮಣಕಾರಿ ಆಟವಾಡಿದ ಪರಿಣಾಮ, ಸೀಮಿತ ಓವರ್‌ಗಳ ಸರಣಿಯ ಟ್ರೋಫಿ ಗಳನ್ನು ನಮ್ಮದಾಗಿಸಿಕೊಂಡಿದ್ದೇವೆ. ಒಂದು ತಂಡವಾಗಿ ಎಂತಹುದೇ ಸಂದರ್ಭದಲ್ಲೂ ನಾವು ತಲೆಬಾಗುವುದಿಲ್ಲ. ಇದೇ ಕಾರಣದಿಂದ ಚಾಂಪಿಯನ್‌ಗಳಾಗಿ ನಾವಿಂದು ನಿಮ್ಮ ಮುಂದೆ ನಿಂತಿದ್ದೇವೆ’ ಎಂದು ದ.ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಗೆದ್ದ ಬಳಿಕ ರೋಹಿತ್ ಹೇಳಿದರು.

ಬೌಲರ್‌ಗಳ ಅದ್ಭುತ ಪ್ರದರ್ಶನ: ಆಫ್ರಿಕಾ ನೆಲದಲ್ಲಿ ‘ನಾವು ಸಾಕಷ್ಟು ಯೋಜನೆಗಳ ಕುರಿತು ಚರ್ಚೆ ನಡೆಸಿದ್ದವು. ಇಲ್ಲಿನ ಪಿಚ್‌ಗಳಿಗೆ ಎಂತಹ ಬೌಲಿಂಗ್ ಮಾಡಿದರೆ ಫಲ ನೀಡಲಿದೆ ಎನ್ನುವುದರ ಬಗ್ಗೆಯೂ ಚರ್ಚಿಸಲಾಗ್ತಿತು. ಅದರಂತೆ ಕೊನೆಯ ಟಿ20 ಪಂದ್ಯದ ಮೊದಲ 6 ಓವರ್ ಗಳು ಆದಷ್ಟು ಬಿಗಿಯಾದ ದಾಳಿ ಸಂಘಟಿಸಲು ಯೋಜಿಸಿದ್ದವು. ನಮ್ಮ ಬೌಲರ್‌ಗಳು ಅದರಂತೆ ಬೌಲ್ ಮಾಡಿದರು. ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಒತ್ತಡವನ್ನು ನಿಭಾಯಿಸಲು ಸಂಪೂರ್ಣ ಯಶಸ್ವಿಯಾಗಲಿಲ್ಲ.

ಕೊನೆಯ ಓವರ್‌ನ ಕೊನೆಯ ಎಸೆತದವರೆಗೂ ಹೋದ ಪಂದ್ಯವನ್ನು ಗೆದ್ದು ಸರಣಿ ಜಯಿಸುವ ಆಫ್ರಿಕಾದ ಆಸೆ ಕೊನೆಗೂ ಈಡೇರಲಿಲ್ಲ. ಆಫ್ರಿಕಾ ವಿರುದ್ಧದ ಜಯದ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು. ಇದು ಸಂಪೂರ್ಣವಾಗಿ ಬೌಲರ್‌ಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿತ್ತು ಎಂದು ಶರ್ಮಾ ಬೌಲರ್‌ಗಳನ್ನು ಕೊಂಡಾಡಿದರು.

‘ಪ್ರಮಾಣಿಕವಾಗಿ ಹೇಳಬೇಕೆಂದರೆ, ನಮಗಿನ್ನೂ 15 ರನ್‌ಗಳ ಅವಶ್ಯವಿತ್ತು. ಏಕೆಂದರೆ ಮೊದಲಾರ್ಧ ಸಾಗಿದ ರೀತಿಯನ್ನು ನೋಡಿದರೆ ಪಂದ್ಯ ಕೈಯಿಂದ ಜಾರಿತು ಎಂದೆ ಭಾವಿಸಿದ್ದೆವು. ಆದರೆ, ಬೌಲರ್‌ಗಳ ಕರಾರುವಕ್ ದಾಳಿ, ಪಂದ್ಯಕ್ಕೆ ಮರುಜೀವ ನೀಡಿದರು. ನಿಜಕ್ಕೂ  ಬೌಲರ್‌ಗಳ ಪ್ರಭಾವಿ ಪ್ರದರ್ಶನ ಆಫ್ರಿಕಾ ಕೈ ಯಿಂದ ಗೆಲುವನ್ನು ಕಸಿದಿತ್ತು. ಈ ರೀತಿಯ ಪಂದ್ಯಗಳು ನಮಗೆ ಸಾಕಷ್ಟು ಪಾಠ ಕಲಿಸುತ್ತದೆ’ ಎಂದು ಶರ್ಮಾ ಹೇಳಿದರು.

‘ನಾವು ಪವರ್‌ಪ್ಲೇನಲ್ಲಿ ಬ್ಯಾಟ್ ಮಾಡುವಾಗ ಆಫ್ರಿಕಾ ಬೌಲರ್‌ಗಳು ಉತ್ತಮವಾಗಿ ಬೌಲ್ ಮಾಡಿದರು. ನಾವು ಒಂದೇ ಒಂದು ಬೌಂಡರಿ ಬಾರಿಸಲು ಆಗಲಿಲ್ಲ. ಆದರೆ, ಪವರ್‌ಪ್ಲೇನಲ್ಲಿ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳು ಆಕರ್ಷಕ ಬ್ಯಾಟಿಂಗ್ ಮಾಡಿದರು. 170 ರನ್ ಅನ್ನು ಅವರು ಚೇಸ್ ಮಾಡುತ್ತಾರೆ ಎಂದುಕೊಂಡಿದ್ದೆ. ಅವರು ಹೋರಾಟ ನಡೆಸಿದ ರೀತಿ ಹಾಗಿತ್ತು. ಅದರಲ್ಲೂ ಜೊಂಕರ್ ಆಟ ನಿಜಕ್ಕೂ ಅದ್ಭುತವಾಗಿತ್ತು. ಡುಮಿನಿ ಆಕರ್ಷಕ ಬ್ಯಾಟಿಂಗ್‌ನಿಂದ ಗಮನಸೆಳೆದರು. ಆದರೆ ಕೊನೆಯಲ್ಲಿ ಭಾರತದ ವೇಗಿಗಳ ಕರಾರುವಕ್ ಬೌಲಿಂಗ್ ದಾಳಿಯೇಯಶಸ್ಸಿಗೆ ಪ್ರಮುಖ ಕಾರಣವಾಯಿತು.

loader