Asianet Suvarna News Asianet Suvarna News

ಐಪಿಎಲ್‌ನಿಂದ ಬೌಲರ್ಸ್‌ಗೆ ರೆಸ್ಟ್- ಕೊಹ್ಲಿ ಮನವಿಗೆ ರೋಹಿತ್ ಹೇಳಿದ್ದೇನು?

ಐಪಿಎಲ್ ಟೂರ್ನಿಯಿಂದ 2019ರ ವಿಶ್ವಕಪ್ ಆಡೋ ಟೀಂ ಇಂಡಿಯಾ ವೇಗಿಗಳಿಗೆ ವಿಶ್ರಾಂತಿ ನೀಡಬೇಕು ಅನ್ನೋದು ನಾಯಕ ವಿರಾಟ್ ಕೊಹ್ಲಿ ಮನವಿ. ಆದರೆ ಕೊಹ್ಲಿ ಮನವಿಗೆ ರೋಹಿತ್ ಶರ್ಮಾ ಹೇಳಿದ್ದೇನು? ಇಲ್ಲಿದೆ ಉತ್ತರ. 

Rohit Sharma opposes Kohli suggestion of resting Indian pacers in 2019 IPL
Author
Bengaluru, First Published Nov 12, 2018, 8:38 PM IST

ಮುಂಬೈ(ನ.12): 2019ರ ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಈ ಭಾರಿ ವಿಶ್ವಕಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ಈಗಲೇ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ವಿಶ್ವಕಪ್ ಆಡೋ ಟೀಂ ಇಂಡಿಯಾ ವೇಗಿಗಳನ್ನ ಐಪಿಎಲ್‌ನಿಂದ ವಿಶ್ರಾಂತಿ ನೀಡಲು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದರು.

ಕೊಹ್ಲಿ ಮನವಿ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ಗರಂ ಅಸಮಧಾನಗೊಂಡಿದ್ದಾರೆ. ಕಾರಣ ಕೊಹ್ಲಿ ಮನವಿಯನ್ನ ಪುರಸ್ಕರಿಸಿದರೆ, ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ಸಿಗಲಿದೆ. ಹೀಗಾದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್, ಬುಮ್ರಾ ಸೇವೆ ಕಳೆದುಕೊಳ್ಳಲಿದೆ.

ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಅಥವಾ ಫೈನಲ್ ತಲುಪಿದೆ ವೇಲೆ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದರೆ ವಿಶ್ರಾಂತಿ ನೀಡಲು ನಾನು ಇಚ್ಚಿಸುವುದಿಲ್ಲ ಎಂದು ರೋಹಿತ್ ಹೇಳಿದ್ದಾರೆ. ಈ ಮೂಲಕ ಪ್ರಮುಖ ಬೌಲರ್‌ಗಳ ವಿಶ್ರಾಂತಿ ಚಿಂತನೆಗೆ ರೋಹಿತ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios