ಡೆಲ್ಲಿಗೆ ಇಂದು ಗುಜರಾತ್ ಎದುರು ಮಾಡು ಇಲ್ಲವೇ ಮಡಿ ಪಂದ್ಯ..!
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಟೂರ್ನಿಯಲ್ಲಿ8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ತಂಡದ ತಾರಾ ಆಟಗಾರರು ಕೈಕೊಡುತ್ತಿದ್ದು, ಡೇವಿಡ್ ವಾರ್ನರ್, ಪೃಥ್ವಿ ಶಾ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ.
ನವದೆಹಲಿ: ಸತತ ಸೋಲುಗಳೊಂದಿಗೆ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್, 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿಗೆ ತಲುಪಿದ್ದು, ಬುಧವಾರ ನಿರ್ಣಾಯಕ ಕದನದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದೆ. ಗುಜರಾತ್ ಕೂಡಾ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಗೆಲುವಿನ ಹಳಿಯಲ್ಲೇ ಉಳಿದುಕೊಳ್ಳುವ ಕಾತರದಲ್ಲಿದೆ.
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಟೂರ್ನಿಯಲ್ಲಿ8 ಪಂದ್ಯಗಳನ್ನಾಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಿದೆ. ತಂಡದ ತಾರಾ ಆಟಗಾರರು ಕೈಕೊಡುತ್ತಿದ್ದು, ಡೇವಿಡ್ ವಾರ್ನರ್, ಪೃಥ್ವಿ ಶಾ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಹೈದ್ರಾಬಾದ್ ವಿರುದ್ಧ 18 ಎಸೆತದಲ್ಲಿ 65 ರನ್ ಸಿಡಿಸಿದ್ದ ಜೇಕ್ ಪ್ರೇಸರ್ ಮತ್ತೊಮ್ಮೆ ಅಬ್ಬರಿಸಲು ಕಾಯುತ್ತಿದ್ದಾರೆ. ರಿಷಭ್ ಪಂತ್ ಕೂಡಾ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದ್ದು, ಬೌಲಿಂಗ್ ಮೊನಚು ಕಂಡುಕೊಳ್ಳಬೇಕಿದೆ. 10 ವಿಕೆಟ್ ಕಿತ್ತಿರುವ ಕುಲೀಪ್ ಯಾದವ್ ಡೆಲ್ಲಿಯ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದು, ಇತರರಿಂದ ಸೂಕ್ತ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ.
IPL 2024 ಮಾರ್ಕಸ್ ಸ್ಟೋಯ್ನಿಸ್ ಅಬ್ಬರಕ್ಕೆ ಚೆನ್ನೈ ಭದ್ರಕೋಟೆ ಛಿದ್ರ!
ಅತ್ತ ಡೆಲ್ಲಿ ವಿರುದ್ಧ ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಗುಜರಾತ್ ಇದೀಗ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ತಂಡ 8 ಪಂದ್ಯದಲ್ಲಿ ತಲಾ 4 ಗೆಲುವು, ಸೋಲು ಕಂಡಿದೆ. ತಂಡದ ಅಸ್ಥಿರ ಆಟವಾಡುತ್ತಿದ್ದು, ರಶೀದ್ ಖಾನ್, ರಾಹುಲ್ ಅವಾಟಿಯಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್:
ಪೃಥ್ವಿ ಶಾ, ಡೇವಿಡ್ ವಾರ್ನರ್, ಜೇಕ್ ಫೇಸರ್, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ನಾಯಕ), ಟ್ರಿಸ್ಟನ್ ಸ್ಟಬ್, ಅಕ್ಷರ್ ಪಟೇಲ್, ಕುಲೀಪ್ ಯಾದವ್, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
ಗುಜರಾತ್ ಟೈಟಾನ್ಸ್:
ಶುಭಮನ್ ಗಿಲ್(ನಾಯಕ), ವೃದ್ಧಿಮಾನ್ ಸಾಹ, ಡೇವಿಡ್ ಮಿಲ್ಲರ್, ಅಝ್ಮತುಲ್ಲಾ ಓವರ್‌ಝೈ, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.
ಪಂದ್ಯ: ಸಂಜೆ. 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ