‘ಪಂದ್ಯ ಟೈ ಆಗಿ, ಸೂಪರ್ ಓವರ್ ನಡೆಯಬಹುದು ಎಂದು ಅನಿಸಿತು. ಹೀಗಾಗಿ ಡ್ರೆಸ್ಸಿಂಗ್ ಕೊಠಡಿಗೆ ತೆರಳಿ ಪ್ಯಾಡ್ ಕಟ್ಟುತ್ತಿದೆ. ಕಾರ್ತಿಕ್ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ’ ಎಂದು ರೋಹಿತ್ ಪಂದ್ಯದ ಬಳಿಕ ಹೇಳಿದರು.

ಕೊಲಂಬೊ(ಮಾ.20): ದಿನೇಶ್ ಕಾರ್ತಿಕ್ ಬಾರಿಸಿದ ಅತಿ ರೋಚಕ ಕೊನೆ ಬಾಲ್ ಸಿಕ್ಸರ್‌'ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸಾಕ್ಷಿಯಾಗಲಿಲ್ಲ. ಈ ವಿಷಯವನ್ನು ಸ್ವತಃ ರೋಹಿತ್ ಬಹಿರಂಗಗೊಳಿಸಿದ್ದಾರೆ.

‘ಪಂದ್ಯ ಟೈ ಆಗಿ, ಸೂಪರ್ ಓವರ್ ನಡೆಯಬಹುದು ಎಂದು ಅನಿಸಿತು. ಹೀಗಾಗಿ ಡ್ರೆಸ್ಸಿಂಗ್ ಕೊಠಡಿಗೆ ತೆರಳಿ ಪ್ಯಾಡ್ ಕಟ್ಟುತ್ತಿದೆ. ಕಾರ್ತಿಕ್ ಸಿಕ್ಸರ್ ನೋಡಲು ಸಾಧ್ಯವಾಗಲಿಲ್ಲ’ ಎಂದು ರೋಹಿತ್ ಪಂದ್ಯದ ಬಳಿಕ ಹೇಳಿದರು.

‘6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಲಿಲ್ಲ ಎಂದು ಕಾರ್ತಿಕ್ ನನ್ನ ಮೇಲೆ ಸಿಟ್ಟಾಗಿದ್ದರು. ಆದರೆ ಅವರನ್ನು ಕೊನೆಯಲ್ಲಿ ಕಳುಹಿಸುವ ಯೋಜನೆ ಕೈಹಿಡಿಯಿತು’ ಎಂದು ರೋಹಿತ್ ಹೇಳಿದರು.

ಕೊನೆಯ ಎಸೆತದಲ್ಲಿ 5 ರನ್'ಗಳ ಅವಶ್ಯಕತೆಯಿದ್ದಾಗ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿ ಟೀಂ ಇಂಡಿಯಾಗೆ ಸ್ಮರಣೀಯ ಗೆಲುವು ತಂದಿತ್ತರು.