ವಿಶ್ವದ 26ನೇ ಶ್ರೇಯಾಂಕಿತ ಸ್ಯಾಮ್ ಕೆರ್ರಿ, ಕಳೆದ ವಾರ ನಡೆದಿದ್ದ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌'ನ ರಾಫೆಲ್ ನಡಾಲ್ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು.

ನವದೆಹಲಿ(ಮಾ.10): ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ, ತಮ್ಮ ಹಿಂದಿನ ಜತೆಗಾರ ಅರ್ಜೆಂಟೀನಾದ ಪಾಬ್ಲೊ ಕುವೇಸ್ ಜತೆಗೂಡಿದ್ದು ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ವಿಕ್ಟರ್ ಟ್ರಿಸಿಕಿ ಜೋಡಿಯನ್ನು ಎದುರಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಸಕ್ತ ಟೂರ್ನಿಯಲ್ಲಿ ಭಾರತದ ಮತ್ತೊಬ್ಬ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್, ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಜತೆಯಾಗಿದ್ದು, ಮೊದಲ ಪಂದ್ಯದಲ್ಲಿ ಈ ಜೋಡಿ ಲುಕ್ಸೆಂಬರ್ಗ್‌ನ ಗಿಲ್ಲೆಸ್ ಮುಲ್ಲೆರ್ ಮತ್ತು ಅಮೆರಿಕದ ಸ್ಯಾಮ್ ಕೆರ್ರಿ ಎದುರು ಸೆಣಸಲಿದೆ.

ವಿಶ್ವದ 26ನೇ ಶ್ರೇಯಾಂಕಿತ ಸ್ಯಾಮ್ ಕೆರ್ರಿ, ಕಳೆದ ವಾರ ನಡೆದಿದ್ದ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌'ನ ರಾಫೆಲ್ ನಡಾಲ್ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು.