2022ರ ಗರಿಷ್ಠ ಗಳಿಕೆಯಲ್ಲಿ ರೋಜರ್ ಫೆಡರರ್ ನಂ.1 ಟೆನಿಸಿಗ..!
* ಆದಾಯ ಗಳಿಕೆಯಲ್ಲಿ ಮತ್ತೊಮ್ಮೆ ನಂ.1 ಸ್ಥಾನ ಕಾಯ್ದುಕೊಂಡ ಟೆನಿಸ್ ದಿಗ್ಗಜ ರೋಜರ್ ಫೆಡರರ್
* ಸತತ 17ನೇ ವರ್ಷ ಅತಿಹೆಚ್ಚು ಹಣ ಸಂಪಾದಿಸಿದ ಟೆನಿಸಿಗ ಎನ್ನುವ ಕೀರ್ತಿ ಫೆಡರರ್ ಪಾಲು
* ಡರರ್ ಜಾಹೀರಾತು ಒಪ್ಪಂದಗಳು, ಪ್ರಾಯೋಜಕತ್ವದ ಮೂಲಕ ಗಳಿಕೆ
ಲಂಡನ್(ಆ.27): 14 ತಿಂಗಳುಗಳಿಂದ ವೃತ್ತಿಪರ ಟೆನಿಸ್‌ನಿಂದ ದೂರವಿದ್ದರೂ 2022ರಲ್ಲಿ ಸ್ವಿಜರ್‌ಲೆಂಡ್‌ನ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್ ಬರೋಬ್ಬರಿ 90 ಮಿಲಿಯನ್ ಡಾಲರ್(ಅಂದಾಜು 718 ಕೋಟಿ ರು.) ಸಂಪಾದಿಸಿದ್ದಾರೆ ಎಂದು ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕ ವರದಿ ಮಾಡಿದೆ. ಈ ಮೂಲಕ ಸತತ 17ನೇ ವರ್ಷ ಅತಿಹೆಚ್ಚು ಹಣ ಸಂಪಾದಿಸಿದ ಟೆನಿಸಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಫೆಡರರ್ ಜಾಹೀರಾತು ಒಪ್ಪಂದಗಳು, ಪ್ರಾಯೋಜಕತ್ವ ಹಾಗೂ ಇತರ ವ್ಯವಹಾರಗಳ ಮೂಲಕ ಹಣ ಗಳಿಸಿದ್ದಾರೆ.
41 ವರ್ಷದ ರೋಜರ್ ಫೆಡರರ್ ಕಳೆದ ವರ್ಷ ನಡೆದ ವಿಂಬಲ್ಡನ್ ಟೆನಿಸ್ ಗ್ರ್ಯಾನ್ ಬಳಿಕ ಟೆನಿಸ್‌ನಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷವೇ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಫೆಡರರ್, ಟೆನಿಸ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾ. ಹೀಗಿದ್ದೂ ತಮ್ಮ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 20 ಟೆನಿಸ್ ಗ್ರ್ಯಾನ್ ಸ್ಲಾಂ ಒಡೆಯ ರೋಜರ್ ಫೆಡರರ್‌ಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.
ಜಪಾನ್‌ನ ನವೊಮಿ ಒಸಾಕ 56.2 ಮಿಲಿಯನ್ ಡಾಲರ್(ಅಂದಾಜು 448 ಕೋಟಿ ರು.)ನೊಂದಿಗೆ 2ನೇ ಸ್ಥಾನದಲ್ಲಿದ್ದು, ಸೆರೆನಾ ವಿಲಿಯಮ್ಸ್ 35.1 ಮಿಲಿಯನ್ ಡಾಲರ್(ಅಂದಾಜು 281 ಕೋಟಿ ರು.)ನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಯುಎಸ್ ಓಪನ್ ಸಿಂಗಲ್ಸ್: ಭಾರತದ ಅಭಿಯಾನ ಅಂತ್ಯ
ನ್ಯೂಯಾರ್ಕ್: ಭಾರತದ ತಾರಾ ಟೆನಿಸಿಗ ಯೂಕಿ ಭಾಂಬ್ರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್‌ನ ಅರ್ಹತಾ ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಪ್ರಧಾನ ಸುತ್ತಿಗೇರುವ ಭಾರತೀಯ ಟೆನಿಸಿಗರ ಕನಸು ಸತತ 2ನೇ ವರ್ಷವೂ ಭಗ್ನಗೊಂಡಿತು.
ಭಾರತ ಫುಟ್ಬಾಲ್ ಮೇಲಿನ ನಿಷೇಧ ಹಿಂಪಡೆದ ಫಿಫಾ..!
ಶುಕ್ರವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ 552ನೇ ಶ್ರೇಯಾಂಕಿತ ಯೂಕಿ, ವಿಶ್ವ ನಂ.155 ಬೆಲ್ಜಿಯಂನ ಜಿಜೊಯು ಬೆರ್‌್ಗ ವಿರುದ್ಧ 3-6, 3-6 ನೇರ ಸೆಟ್‌ಗಳಿಂದ ಪರಾಭವಗೊಂಡರು. 2020ರಲ್ಲಿ ಸುಮಿತ್ ನಗಾಲ್ ಪ್ರಧಾನ ಸುತ್ತಿನಲ್ಲಿ ಸ್ಪರ್ಧಿಸಿ 2ನೇ ಸುತ್ತಲ್ಲಿ ಸೋಲು ಕಂಡಿದ್ದರು. ಆ ಬಳಿಕ ಭಾರತೀಯರು ಪ್ರಧಾನ ಸುತ್ತಿನ ಸಿಂಗಲ್ಸ್‌ನಲ್ಲಿ ಆಡಿಲ್ಲ.
ಜೂಡೋ ವಿಶ್ವ ಚಿನ್ನ ಜಯಿಸಿದ ಭಾರತದ 15ರ ಲಿಂಥೊಯಿ
ಸರೇಜಾವೊ: ಬೋಸ್ನಿಯಾದ ರಾಜಧಾನಿ ಸರೇಜಾವೊ ಎಂಬಲ್ಲಿ ನಡೆಯುತ್ತಿರುವ ವಿಶ್ವ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಮಣಿಪುರದ 15 ವರ್ಷದ ಲಿಂಥೊಯಿ ಚನಾಂಬಮ್ ಅಂಡರ್ 17, 57 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದಿದ್ದಾರೆ. ಇದು ಈವರೆಗೆ ವಿಶ್ವ ಚಾಂಪಿಯನ್‌ಶಿಪ್‌ನ ಯಾವುದೇ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕ ಎನಿಸಿಕೊಂಡಿದೆ.
ಅಕ್ಟೋಬರ್ 7ರಿಂದ 9ನೇ ಆವೃತ್ತಿ ಪ್ರೊ ಕಬಡ್ಡಿ
ಮುಂಬೈ: ಬಹುನಿರೀಕ್ಷಿತ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ದಿನಗಣನೆ ಆರಂಭವಾಗಿದ್ದು, ಅಕ್ಟೋಬರ್ 7ರಂದು ಲೀಗ್‌ಗೆ ಚಾಲನೆ ಸಿಗಲಿದೆ ಎಂದು ಆಯೋಜಕರು ಶುಕ್ರವಾರ ಘೋಷಿಸಿದ್ದಾರೆ. ಈ ಬಾರಿ ಲೀಗ್ ಪಂದ್ಯಗಳಿಗೆ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಆತಿಥ್ಯ ವಹಿಸಲಿದ್ದು, ಡಿಸೆಂಬರ್‌ನಲ್ಲಿ ಲೀಗ್ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರಾದ ಮಷಾಲ್ ಸ್ಪೋಟ್ಸ್‌ರ್ ಮಾಹಿತಿ ನೀಡಿದೆ. ಆದರೆ ಪಂದ್ಯಗಳ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಪಂದ್ಯಗಳು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಸಂಪೂರ್ಣ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಲೀಗ್ ನಡೆದಿದ್ದು, ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿ ಪಂದ್ಯಗಳು ನಡೆಯಲಿರುವ ಮೂರು ಕಡೆಗಳಲ್ಲೂ ಪ್ರೇಕ್ಷಕರಿಗೆ ನೇರವಾಗಿ ಪಂದ್ಯ ವೀಕ್ಷಿಸಲು ಅನುಮತಿ ನೀಡುವುದಾಗಿ ಆಯೋಜಕರು ತಿಳಿಸಿದ್ದಾರೆ. ಆಟಗಾರರ ಹರಾಜು ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದಿತ್ತು.