ಆಸ್ಟ್ರೇಲಿಯನ್ ಓಪನ್: ಸೆಮೀಸ್'ಗೆ ಲಗ್ಗೆಯಿಟ್ಟ ಫೆಡರರ್

First Published 24, Jan 2018, 11:49 PM IST
Roger Federer the oldest Australian Open semifinalist in 41 years
Highlights

ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಚೆಕ್ ಗಣರಾಜ್ಯದ ಥಾಮಸ್ ಬರ್ಡಿಚ್ ವಿರುದ್ಧ 7-6(7-1), 6-3, 6-4 ನೇರ ಸೆಟ್‌'ಗಳಲ್ಲಿ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 36 ವರ್ಷದ ಸ್ವಿಸ್ ತಾರೆ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಹಿರಿಯ ಆಟಗಾರ ಎನ್ನುವ ಗೌರವಕ್ಕೂ ಭಾಜನರಾದರು.

ಮೆಲ್ಬರ್ನ್(ಜ.24): ಟೆನಿಸ್ ಮಾಂತ್ರಿಕ ಸ್ವಿಸ್ ತಾರೆ ರೋಜರ್ ಫೆಡರರ್ 20ನೇ ಗ್ರ್ಯಾಂಡ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದು, ಆಸ್ಟ್ರೇಲಿಯನ್ ಓಪನ್'ನಲ್ಲಿ ಜಯದ ನಾಗಾಲೋಟ ಮುಂದುವರೆಸಿದ್ದಾರೆ.

ಇಂದು ನಡೆದ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌'ನಲ್ಲಿ ಚೆಕ್ ಗಣರಾಜ್ಯದ ಥಾಮಸ್ ಬರ್ಡಿಚ್ ವಿರುದ್ಧ 7-6(7-1), 6-3, 6-4 ನೇರ ಸೆಟ್‌'ಗಳಲ್ಲಿ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ 36 ವರ್ಷದ ಸ್ವಿಸ್ ತಾರೆ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ ಹಿರಿಯ ಆಟಗಾರ ಎನ್ನುವ ಗೌರವಕ್ಕೂ ಭಾಜನರಾದರು.

ಬಲಿಷ್ಠ ಸರ್ವ್'ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬು ಮಾಡಿದ 36 ವರ್ಷದ ಸ್ವಿಸ್ ಟೆನಿಸಿಗ ಅನಾಯಾಸವಾಗಿ ಪಂದ್ಯವನ್ನು ಗೆದ್ದುಕೊಂಡರು. ಇದೀಗ ಫೆಡರರ್ ಪ್ರಶಸ್ತಿ ಸುತ್ತಿಗೆ ತಲುಪಲು ಕ್ವಾರ್ಟರ್'ಫೈನಲ್ಸ್ ಪಂದ್ಯದಲ್ಲಿ ದಕ್ಷಿಣ ಕೋರಿಯಾದ ಹ್ಯುನ್ ಚುಂಗ್ ವಿರುದ್ಧ ಕಾದಾಡಲಿದ್ದಾರೆ.

ಸೆಮೀಸ್‌ಗೆ ಬೋಪಣ್ಣ ಜೋಡಿ

ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯ ಟಿಮಿಯಾ ಬಾಬೊಸ್ ಜೋಡಿ, ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಸೆಮೀಸ್‌ಗೆ ಪ್ರವೇಶಿಸಿದ್ದಾರೆ. ಬೋಪಣ್ಣ-ಬಾಬೋಸ್ ಜೋಡಿ, ಕ್ವಾರ್ಟರ್ ಫೈನಲ್‌ನಲ್ಲಿ ಕೊಲಿಂಬಿಯಾದ ಸೆಬಾಸ್ಟಿಯನ್ ಹಾಗೂ ಯುಎಸ್‌'ಎನ ಸ್ಪಿಯರ್ಸ್‌ ಜೋಡಿ ವಿರುದ್ಧ 6-4, 7-6 ಸೆಟ್‌'ಗಳಲ್ಲಿ ಗೆಲುವು ಸಾಧಿಸಿತು.

 

loader