ಗೆಲುವಿನ ಬಳಿಕ ಮಾತನಾಡಿದ ಫೆಡರರ್, ಪಂದ್ಯ ಗೆದ್ದಿದ್ದಕ್ಕೆ ಸಂತಸವಾಗುತ್ತಿದೆ. ನಾನು ಕಠಿಣ ಸ್ಪರ್ಧೆ ಎದುರಿಸಲು ಸದಾ ಸಿದ್ದನಿರುತ್ತೇನೆಂದು' ಹೇಳಿದ್ದಾರೆ
ಬಸೆಲ್(ಅ.27): ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಇಲ್ಲಿ ನಡೆಯುತ್ತಿರುವ ಬಸೆಲ್ ಓಪನ್ ಟೆನಿಸ್ ಚಾಂಪಿಯನ್'ಶಿಪ್‌ನಲ್ಲಿ 15ನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಪ್ರೀ ಕ್ವಾರ್ಟರ್ ಫೈನಲ್'ನಲ್ಲಿ ಫ್ರಾನ್ಸ್‌ನ ಬೈನೆಟ್ ಪೈರ್'ರನ್ನು 6-1, 6-3 ನೇರ ಸೆಟ್'ಗಳಿಂದ ಮಣಿಸುವ ಮೂಲಕ ಎಂಟರಘಟ್ಟಕ್ಕೆ ಲಗ್ಗೆಯಿಟ್ಟ ಫೆಡಡರ್ 8ನೇ ಬಾರಿ ಸ್ವಿಸ್ ಒಳಾಂಗಣ ಟೆನಿಸ್ ಪಂದ್ಯಾವಳಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
57 ನಿಮಿಷ ನಡೆದ ಕಾದಾಟದಲ್ಲಿ ಫೆಡರರ್, ಫ್ರಾನ್ಸ್ ಆಟಗಾರನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಈ ಜಯದೊಂದಿಗೆ ಪೈರ್ ವಿರುದ್ಧ ಫೆಡರರ್ ಅಜೇಯ 5ನೇ ಗೆಲುವು ದಾಖಲಿಸಿದರು.
ಗೆಲುವಿನ ಬಳಿಕ ಮಾತನಾಡಿದ ಫೆಡರರ್, ಪಂದ್ಯ ಗೆದ್ದಿದ್ದಕ್ಕೆ ಸಂತಸವಾಗುತ್ತಿದೆ. ನಾನು ಕಠಿಣ ಸ್ಪರ್ಧೆ ಎದುರಿಸಲು ಸದಾ ಸಿದ್ದನಿರುತ್ತೇನೆಂದು' ಹೇಳಿದ್ದಾರೆ