ವಿಂಬಲ್ಡನ್ 2018: ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ರೋಜರ್ ಫೆಡರರ್

Roger Federer into Wimbledon quarter-finals by beating Adrian Mannarino
Highlights

ವಿಂಬಲ್ಡನ್ ಟೂರ್ನಿಯಲ್ಲಿ ರೋಜರ್ ಫೆಡರರ್ ಪರಕ್ರಮ ಮುಂದುವರಿದಿದೆ. 21ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫೆಡರರ್ ವಿಂಬಲ್ಡನ್ ಹೋರಾಟ ಹೇಗಿದೆ ಇಲ್ಲಿದೆ ವಿವರ.

ಲಂಡನ್(ಜು.09): ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಸ್ವಿಟ್ಜರ್‌ಲೆಂಡ್ ದಿಗ್ಗಜ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ 21ನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲೋ ಸೂಚನೆ ನೀಡಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟ ಪಂದ್ಯದಲ್ಲಿ ಫೆಡರರ್, ಫ್ರಾನ್ಸ್‌  ಟೆನಿಸ್ ಪಟು ಅಡ್ರಿಯಾನ್ ಮುನ್ನಾರಿನೋ ವಿರುದ್ಧ 6-0,7-5 ಹಾಗೂ 6-4 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು.

ಭರ್ಜರಿ ಗೆಲುವಿನ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಫೆಡರರ್, ಫ್ರಾನ್ಸ್ ಆಟಗಾರ ಮೊಂಫಿಲ್ಸ್ ಅಥವಾ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ವಿರುದ್ಧ ಹೋರಾಟ ನಡೆಸಲಿದ್ದಾರೆ. ಈ ಮೂಲಕ 53ನೇ ಗ್ರ್ಯಾಂಡ್ ಸ್ಲಾಂ ಕ್ವಾರ್ಟರ್ ಫೈನಲ್ ಹೋರಾಟಕ್ಕೆ ಫೆಡರರ್ ಸಜ್ಜಾಗಿದ್ದಾರೆ.

ರಾನಿಕ್‌ಗೆ ಗೆಲುವು: ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕೆನಾಡದ ಮಿಲಾಸ್ ರಾನಿಕ್ ಗೆಲುವು ಸಾಧಿಸೋ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 16ರ ಘಟ್ಟದ ಪಂದ್ಯದಲ್ಲಿ ರಾನಿಕ್, ಅಮೇರಿಕಾದ ಮೆಕೆಂಜಿ ಮೆಕ್‌ಡೋನಾಲ್ಡ್ ವಿರುದ್ಧ 3-6,6-4 ಹಾಗೂ 6-5 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು

loader