ರಾಫೆಲ್ ನಡಾಲ್ ಟೆನಿಸ್ ಅಕಾಡೆಮಿಯ ತಂಡ ಮತ್ತು ಕುಟುಂಬಕ್ಕೆ ಶುಭವಾಗಲಿ ಎಂಬ ಸಂದೇಶದ ವೀಡಿಯೋವೊಂದನ್ನು ನಡಾಲ್‌'ಗೆ ಫೆಡರರ್ ಕಳುಹಿಸಿದ್ದಾರೆ.
ಲಂಡನ್(ಅ.21): ವಿಶ್ವದ ನಂ.1 ಟೆನಿಸಿಗ ಸ್ಪೇನ್'ನ ರಾಫೆಲ್ ನಡಾಲ್ ಟೆನಿಸ್ ಅಕಾಡೆಮಿಯ ಮೊದಲ ವರ್ಷದ ವಾರ್ಷಿಕೋತ್ಸವಕ್ಕೆ ದಾಖಲೆ ಗ್ರ್ಯಾಂಡ್'ಸ್ಲಾಮ್ ಒಡೆಯ ಸ್ವಿಟ್ಜರ್'ಲೆಂಡ್'ನ ಟೆನಿಸ್ ಆಟಗಾರ ರೋಜರ್ ಫೆಡರರ್ ಶುಭಕೋರಿದ್ದಾರೆ.
ರಾಫೆಲ್ ನಡಾಲ್ ಟೆನಿಸ್ ಅಕಾಡೆಮಿಯ ತಂಡ ಮತ್ತು ಕುಟುಂಬಕ್ಕೆ ಶುಭವಾಗಲಿ ಎಂಬ ಸಂದೇಶದ ವೀಡಿಯೋವೊಂದನ್ನು ನಡಾಲ್'ಗೆ ಫೆಡರರ್ ಕಳುಹಿಸಿದ್ದಾರೆ.
19 ಗ್ರ್ಯಾಂಡ್ ಸ್ಲಾಮ್ ವಿಜೇತ ಫೆಡರರ್, ನಡಾಲ್ ಅಕಾಡೆಮಿಯ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಪೇನ್'ನ ಬಲೇರಿಕ್'ನಲ್ಲಿ ನಡಾಲ್ ಅಕಾಡೆಮಿ ನಡೆಸುತ್ತಿದ್ದಾರೆ.
