ಫೆಡರರ್‌ಗೆ ಸ್ಟುಟ್‌ಗಾರ್ಟ್ ಚಾಂಪಿಯನ್ ಕಿರೀಟ

First Published 18, Jun 2018, 10:30 AM IST
Roger Federer beats Milos Raonic for Stuttgart title, his 18th on grass
Highlights

ಫ್ರೆಂಚ್ ಓಪನ್ ಟೂರ್ನಿ ಮಿಸ್ ಮಾಡಿಕೊಂಡಿದ್ದ ರೋಜರ್ ಫೆಡರರ್, ಇದೀಗ ಸ್ಟುಟ್‌ಗಾರ್ಟ್ ಓಪನ್ ಟೂರ್ನಿ ಪ್ರಶಸ್ತಿ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಫೆಡರರ್ ಹೋರಾಟ ಹೇಗಿತ್ತು? ಇಲ್ಲಿದೆ ವಿವರ

ಸ್ಟುಟ್‌ಗಾರ್ಟ್(ಜೂ.18): ವಿಶ್ವದ ನಂ.1 ರ‍್ಯಾಂಕಿಂಗ್ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ಭಾನುವಾರ ಇಲ್ಲಿ ನಡೆದ ಸ್ಟುಟ್‌ಗಾರ್ಟ್ ಓಪನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಫೆಡರರ್ 6-4,7-7 ಸೆಟ್‌ಗಳಲ್ಲಿ ಕೆನಡಾದ ಮಿಲೋಸ್ ರೊನಿಕ್ ಎದುರು ಗೆಲುವು ಸಾಧಿಸಿದರು. ಮೊದಲ ಸೆಟ್‌ನಲ್ಲಿ ಸುಲಭ ಜಯ ಪಡೆದ ಫೆಡರರ್, 2ನೇ ಸೆಟ್‌ನಲ್ಲಿ ಟೈ ಬ್ರೇಕರ್ ಅವಕಾಶದಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡು ಪಂದ್ಯ ಗೆದ್ದರು.

ಎರಡೂವರೆ ತಿಂಗಳ ಬಳಿಕ ಆರಂಭಿಸಿದ ಮೊದಲ ಟೂರ್ನಿಯಲ್ಲಿ ಫೆಡರರ್ ಪ್ರಶಸ್ತಿ ಗೆದ್ದಿದ್ದಾರೆ. ಮಾಚ್‌ನರ್ಲ್ಲಿ ನಡೆದಿದ್ದ ಮಿಯಾಮಿ ಓಪನ್ ಬಳಿಕ ಫೆಡರರ್,ಯಾವುದೇ ಟೂರ್ನಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆವೆ ಮಣ್ಣಿನ ಅಂಕಣದ ಫ್ರೆಂಚ್ ಓಪನ್‌ನನ್ನು ಫೆಡರರ್ ಮಿಸ್ ಮಾಡಿಕೊಂಡಿದ್ದರು. ಆದರೆ ಸ್ಟುಟ್‌ಗಾರ್ಟ್ ಓಪನ್ ಚಾಂಪಿಯನ್ ಮೂಲಕ ಫೆಡರರ್ 98ನೇ ಟೂರ್ ಪ್ರಶಸ್ತಿ ಗೆದ್ದರು. ಇದೇ ಟೂರ್ನಿಯ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾದ ನಿಕ್ ಕರಿಯೋಸ್ ಎದುರು ಗೆದ್ದ ಫೆಡರರ್, ವಿಶ್ವ ನಂ.1 ರ‍್ಯಾಂಕಿಂಗ್ ಪಡೆದಿದ್ದರು.

loader