ಉತ್ತಪ್ಪ ಅವರನ್ನು ಕೇರಳ ಹಾಗೂ ವಿದರ್ಭ ರಾಜ್ಯ ಸಂಸ್ಥೆಗಳೂ ಸಂಪರ್ಕಿಸಿದ್ದವು. ಅಂತಿಮವಾಗಿ ಅವರು ಸೌರಾಷ್ಟ್ರ ಪಾಲಾಗಿದ್ದಾರೆ. ಈ ಮೊದಲು ಉತ್ತಪ್ಪ ಕೇರಳ ಪಾಲಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು

ಬೆಂಗಳೂರು(ಆ.10): ಕರ್ನಾಟಕದ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಪ್ರಸಕ್ತ ಸಾಲಿನ ಅಂದರೆ 2017-18ರ ಸಾಲಿನ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಉತ್ತಪ್ಪ ಸುತ್ತ ಹರಿದಾಡುತ್ತಿದ್ದ ಸಾಕಷ್ಟು ಊಹಾಪೋಹಗಳಿಗೆ ಕಡಿವಾಣ ಬಿದ್ದಂತಾಗಿದೆ.

‘ರಾಬಿನ್ ಬಿಸಿಸಿಐ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯೊಂದಿಗೆ ಅಗತ್ಯ ಔಪಚಾರಿಕತೆಗಳನ್ನು ಪೂರೈಸಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಉತ್ತಪ್ಪ ಅವರನ್ನು ಸ್ವಾಗತಿಸುತ್ತದೆ’ ಎಂದು ಎಸ್‌'ಸಿಎ ಮಾಧ್ಯಮ ವ್ಯವಸ್ಥಾಪಕ ಹಿಮಾಂಶು ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2002-03 ಋತುವಿನಲ್ಲಿ ಕರ್ನಾಟಕ ಪರ ಪಾದಾರ್ಪಣೆ ಮಾಡಿದ್ದ ಉತ್ತಪ್ಪ, ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ 2016-17ರ ಸಾಲಿನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಹಿನ್ನಲೆಯಲ್ಲಿ, ಕೊನೆ ಲೀಗ್ ಪಂದ್ಯ ಹಾಗೂ ಕ್ವಾರ್ಟರ್ ಫೈನಲ್‌ನಿಂದ ಅವರನ್ನು ಕೈಬಿಡಲಾಗಿತ್ತು. ಅಂತಿಮವಾಗಿ 15 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಉತ್ತಪ್ಪ, ಇದೀಗ ಸೌರಾಷ್ಟ್ರ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಉತ್ತಪ್ಪ ಅವರನ್ನು ಕೇರಳ ಹಾಗೂ ವಿದರ್ಭ ರಾಜ್ಯ ಸಂಸ್ಥೆಗಳೂ ಸಂಪರ್ಕಿಸಿದ್ದವು. ಅಂತಿಮವಾಗಿ ಅವರು ಸೌರಾಷ್ಟ್ರ ಪಾಲಾಗಿದ್ದಾರೆ. ಈ ಮೊದಲು ಉತ್ತಪ್ಪ ಕೇರಳ ಪಾಲಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು