ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಸರಣಿಯನ್ನ ಎದುರುನೋಡುತ್ತಿದ್ದಾರೆ. ಪಂತ್ ಆಯ್ಕೆಗೆ ಎಂ ಎಸ್ ಧೋನಿ ಕಾರಣ ಅನ್ನೋ ಮಾಹಿತಿ ಬಹಿರಂಗವಾಗಿದೆ. ರಿಷಬ್ ಪಂತ್ ಆಯ್ಕೆಗೆ ಧೋನಿ ಕಾರಣವಾಗಿದ್ದು ಹೇಗೆ? ಇಲ್ಲಿದೆ ವಿವರ.
ಲಂಡನ್(ಜು.24): ಟೀಂ ಇಂಡಿಯಾ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಎಂ ಎಸ್ ಧೋನಿ ಹಲವು ಯುವ ಕ್ರಿಕೆಟಿಗರಿಗೆ ಮಾರ್ಗದರ್ಶಕರಾಗಿದ್ದಾರೆ. ಧೋನಿ ನೆರವಿನಿಂದ ಹಲವು ಕ್ರಿಕೆಟಿಗರು ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್‌ಗಳಾಗಿದ್ದಾರೆ. ಇದೀಗ ರಿಷಬ್ ಪಂತ್ ಆಯ್ಕೆಗೆ ಎಂ ಎಸ್ ಧೋನಿ ಕಾರಣ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ಪಂತ್ ಕಿರಿಯ ವಯಸ್ಸಿನಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಲು ಧೋನಿ ಕಾರಣ ಎಂದು ರಿಷಬ್ ಹೇಳಿದ್ದಾರೆ.
ಧೋನಿ ನೀಡಿದ ಸಲಹೆ, ಮಾರ್ಗದರ್ಶನದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಐಪಿಎಲ್ ಟೂರ್ನಿಯಲ್ಲಿ ಧೋನಿ ಬಳಿಯಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿ ಪಂದ್ಯಕ್ಕೂ ಮೊದಲು ಧೋನಿಯಿಂದ ನಾನು ಸಲಹೆ ಕೇಳುತ್ತಿದ್ದೆ ಎಂದು ಪಂತ್ ಹೇಳಿದ್ದಾರೆ.
ಕಳೆದ ಐಪಿಎಲ್ ಟೂರ್ನಿಯಲ್ಲಿ ರಿಷಬ್ ಪಂತ್ 684 ರನ್ ಸಿಡಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ 2ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂತ್ ಮಾತ್ರವಲ್ಲ, ಇಶಾನ್ ಕಿಶನ್ ಸೇರಿದಂತೆ ಯುವ ವಿಕೆಟ್‌ಕೀಪರ್‌ಗಳು ಧೋನಿಯಿಂದ ಸಲಹೆ ಪಡೆದಿದ್ದಾರೆ.
