ಟಿ20ಯಲ್ಲಿ 2ನೇ ವೇಗದ ಶತಕ ಸಿಡಿಸಿದ ರಿಶಬ್ ಪಂತ್..!

Rishabh Pant blasts second fastest century in T20 history
Highlights

ಹಿಮಾಚಲ ಪ್ರದೇಶ ನೀಡಿದ್ದ 144 ರನ್'ಗಳ ಗುರಿ ಬೆನ್ನತ್ತಿದ ಡೆಲ್ಲಿ 10 ವಿಕೆಟ್'ಗಳ ಜಯಭೇರಿ ಬಾರಿಸಿತು. ರಿಷಭ್ 38 ಎಸೆತಗಳಲ್ಲಿ 116 ರನ್(12 ಸಿಕ್ಸ್, 8 ಬೌಂಡರಿ) ಸಿಡಿಸಿದರೆ, ಗೌತಮ್ ಗಂಭೀರ್ 33 ಎಸೆತಗಳಲ್ಲಿ 30 ರನ್ ಬಾರಿಸಿ ರಿಷಭ್'ಗೆ ಉತ್ತಮ ಸಾಥ್ ನೀಡಿದರು.

ನವದೆಹಲಿ(ಜ.14): ಡೆಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಟಿ20 ಕ್ರಿಕೆಟ್'ನಲ್ಲಿ ನೂತನ ದಾಖಲೆ ಬರೆದಿದ್ದಾರೆ. ಚುಟುಕು ಕ್ರಿಕೆಟ್'ನಲ್ಲಿ ವೇಗದ ಶತಕ ಸಿಡಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್'ಮನ್ ಎನ್ನುವ ಕೀರ್ತಿಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಉತ್ತರ ವಲಯ ಟಿ20 ಪಂದ್ಯಾವಳಿಯಲ್ಲಿ ದೆಹಲಿ ಪರ ಆಡುತ್ತಿರುವ ರಿಶಬ್, ಹಿಮಾಚಲ ಪ್ರದೇಶ ವಿರುದ್ಧ ಹೊಸ ದಾಖಲೆ ನಿರ್ಮಿಸಿದ್ದಾರೆ. ಕೇವಲ 32 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ರಿಶಬ್ ಈ ಸಾಧನೆ ಮಾಡಿದ್ದಾರೆ.

ಹಿಮಾಚಲ ಪ್ರದೇಶ ನೀಡಿದ್ದ 144 ರನ್'ಗಳ ಗುರಿ ಬೆನ್ನತ್ತಿದ ಡೆಲ್ಲಿ 10 ವಿಕೆಟ್'ಗಳ ಜಯಭೇರಿ ಬಾರಿಸಿತು. ರಿಷಭ್ 38 ಎಸೆತಗಳಲ್ಲಿ 116 ರನ್(12 ಸಿಕ್ಸ್, 8 ಬೌಂಡರಿ) ಸಿಡಿಸಿದರೆ, ಗೌತಮ್ ಗಂಭೀರ್ 33 ಎಸೆತಗಳಲ್ಲಿ 30 ರನ್ ಬಾರಿಸಿ ರಿಷಭ್'ಗೆ ಉತ್ತಮ ಸಾಥ್ ನೀಡಿದರು.

ಟಿ20 ಮಾದರಿಯಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2013ರ ಐಪಿಎಲ್ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ಎದುರು 30 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ರಿಷಭ್ ರಣಜಿ ಟ್ರೋಫಿ ಫೈನಲ್ ಸೋಲಿನ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದರು.

loader