2015ರಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಉತ್ತರಪ್ರದೇಶದ ವಿರುದ್ದ 337 ಬಾರಿಸುವ ಮೂಲಕ ರಣಜಿ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಎಂಬ ದಾಖಲೆ ನಿರ್ಮಿಸಿದ್ದರು. ಈಗ ಪಂತ್ ಎರಡನೇ ಆಟಗಾರನಾಗಿ ಸೇರ್ಪಡೆಯಾಗಿದ್ದಾರೆ.

ಮುಂಬೈ(ಅ.16): ದೆಹಲಿಯ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮಹರಾಷ್ಟ್ರ ವಿರುದ್ಧ ಭರ್ಜರಿ ತ್ರಿಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿದ ಎರಡನೆ ವಿಕೆಟ್ ಕೀಪರ್ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾರೆ.

ವಿಕೆಟ್ ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿ ಮಾಡಲಾಗದ ಸಾಧನೆಯನ್ನು 19 ವರ್ಷದ ಯುವ ಕ್ರಿಕೆಟಿಗ ರಿಷಬ್ ಪಂತ್ ಮಾಡಿದ್ದಾ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 19 ವರ್ಷದ ಪಂತ್ ತ್ರಿಶತಕ ಬಾರಿಸಿ ಮಿಂಚಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ದೆಹಲಿಯ ಯುವ ಪ್ರತಿಭೆ 328 ಎಸೆತಗಳಲ್ಲಿ 308 ರನ್ ಬಾರಿಸಿ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆಯನ್ನು ನೀಡಿದರು. ಅವರ ಈ ಸೊಗಸಾದ ಇನ್ನಿಂಗ್ಸ್'ನಲ್ಲಿ 42 ಬೌಂಡರಿ ಹಾಗೂ 8 ಸಿಕ್ಸರ್'ಗಳೂ ಸೇರಿದ್ದವು.

ಈ ಮೊದಲು 2015ರಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಉತ್ತರಪ್ರದೇಶದ ವಿರುದ್ದ 337 ಬಾರಿಸುವ ಮೂಲಕ ರಣಜಿ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಎಂಬ ದಾಖಲೆ ನಿರ್ಮಿಸಿದ್ದರು. ಈಗ ಪಂತ್ ಎರಡನೇ ಆಟಗಾರನಾಗಿ ಸೇರ್ಪಡೆಯಾಗಿದ್ದಾರೆ.