Asianet Suvarna News Asianet Suvarna News

ಪ್ಯಾರಾಲಿಂಪಿಕ್ಸ್ ಸಾಧಕರಿಗೆ 90 ಲಕ್ಷ ಬಹುಮಾನ

Rio Paralympics medallists to get Rs 90 lakh cash prize from govt
  • Facebook
  • Twitter
  • Whatsapp

ನವ​ದೆ​ಹ​ಲಿ(ಸೆ.29): ಇತ್ತೀಚೆಗೆ ನಡೆದ ಪ್ಯಾರಾ​ಲಿಂಪಿಕ್ಸ್‌ ಕ್ರೀಡಾ​ಕೂ​ಟ​ದಲ್ಲಿ ಪದಕ ಗೆದ್ದ​ವ​ರಿಗೆ ಕೇಂದ್ರ ಸರ್ಕಾ​ರವು ಒಟ್ಟಾ​ರೆ​ಯಾಗಿ ರೂ. 90 ಲಕ್ಷ ನಗದು ಬಹು​ಮಾನ ಘೋಷಿ​ಸಿದೆ.

ಚಿನ್ನ ಗೆದ್ದವರಿಗೆ . 30 ಲಕ್ಷ ನಿಗ​ದಿ​ಗೊ​ಳಿ​ಸ​ಲಾ​ಗಿದ್ದು, ಮರಿ​ಯ​ಪ್ಪನ್‌ ತಂಗ​ವೇಲು (ಹೈ ಜಂಪ್‌), ದೇವೇಂದ್ರ ಜಜಾ​ರಿಯಾ (ಜ್ಯಾ​ವೆ​ಲಿನ್‌ ಥ್ರೋ) ಪ್ರತ್ಯೇ​ಕ​ವಾಗಿ ಈ ಮೊತ್ತ ಪಡೆ​ಯ​ಲಿ​ದ್ದಾ​ರೆ.

ಇನ್ನು, ಬೆಳ್ಳಿ ವಿಜೇ​ತ​ರಿಗೆ ರೂ. 20 ಲಕ್ಷ ನೀಡ​ಲಾ​ಗು​ತ್ತಿದ್ದು, ಮಹಿ​ಳೆಯರ ಶಾಟ್‌​ಫು​ಟ್‌​ ಪಟು ದೀಪಾ ಮಲಿಕ್‌ ಈ ಪುರ​ಸ್ಕಾರಕ್ಕೆ ಭಾಜ​ನ​ರಾ​ಗ​ಲಿ​ದ್ದಾ​ರೆ. ಇನ್ನು, ಜ್ಯಾವೆ​ಲಿನ್‌ ಥ್ರೋನಲ್ಲಿ ಕಂಚು ಪಡೆ​ದಿದ್ದ ವರುಣ್‌ ಸಿಂಗ್‌ ಭಾಟಿಗೆ ರೂ. 10 ಲಕ್ಷ ದೊರೆ​ಯ​ಲಿ​ದೆ.

Follow Us:
Download App:
  • android
  • ios