ದೆಹಲಿ(ಅ.02):  ಮುಂದಿನ ತಿಂಗಳು ಆರಂಭವಾಗಲಿರುವ ಪ್ರೊ ವ್ರೆಸ್ಲಿಂಗ್ ಲೀಗ್​​​​ನ 2ನೇ ಆವೃತ್ತಿಯಲ್ಲಿ  ತಮ್ಮ ಭಾವಿ ಪತ್ನಿ ಜೊತೆ ಫ್ರಾಂಚೈಸಿ ಪರ ಆಡಲು ಸಾಕ್ಷಿ ಮಲಿಕ್​ ಬಯಸಿದ್ದಾರೆ.

ನಾನು ಮತ್ತು ನನ್ನ ಭಾವಿ ಗಂಡ ಸತ್ಯವ್ರತ್​ ​​​ ಕಾಡಿಯನ್​​​​​ ಒಂದೇ ತಂಡದಲ್ಲಿ ಆಡಿದ್ರೆ ಅದು ತಂಡದ ಫ್ರ್ಯಾಂಚೈಸಿಗೆ ಲಾಭವಾಗಲಿದೆ ಎಂದು ರಿಯೋ ಓಲಂಪಿಕ್ಸ್​​​​ನ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್​​​​ ಹೇಳಿಕೊಂಡಿದ್ದಾರೆ.

ನಾನು ಸತ್ಯವ್ರತ್​  ಆಟಕ್ಕೆ ನೆರವಾಗುತಿದ್ದೇನೆ. ಅದೇ ರೀತಿ ನನ್ನ ಕುಸ್ತಿ ಪಂದ್ಯಗಳಿಗೆ ಸತ್ಯವ್ರತ್ ನೆರವಾಗುತ್ತಾರೆ. ಆದ್ದರಿಂದ ನಾವು ಒಂದೇ ಫ್ರ್ಯಾಂಚಿಸಿಗೆ ಆಡ ಬಯಸುತ್ತೆವೆ ಎಂದು ಹೇಳಿಕೊಂಡಿದ್ದಾರೆ.