ಐಪಿಎಲ್‌'ನಲ್ಲಿ ಈ ಮೊದಲು ಮುಂಬೈ ತಂಡದ ಕೋಚ್ ಆಗಿದ್ದ ಪಾಂಟಿಂಗ್, ಈ ಆವೃತ್ತಿಯಲ್ಲಿ ಡೆಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ಮೆಲ್ಬರ್ನ್(ಫೆ.11): ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಸದ್ಯದಲ್ಲೇ ಆಸ್ಟ್ರೇಲಿಯಾ ಟಿ20 ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2020ರಲ್ಲಿ ಆಸ್ಟ್ರೇಲಿಯಾದಲ್ಲೇ ಟಿ20 ವಿಶ್ವಕಪ್ ನಡೆಯಲಿರುವುದರಿಂದ, ಪಾಂಟಿಂಗ್‌'ರ ಮಾರ್ಗದರ್ಶನ ತಂಡಕ್ಕೆ ಅಗತ್ಯವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕೆಲ ಅಧಿಕಾರಿಗಳು ಭಾವಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಂಟಿಂಗ್, ‘ಟಿ20 ತಂಡದೊಂದಿಗೆ ಕಾರ್ಯನಿರ್ವಹಿಸಲು ನಾನು ಇಚ್ಛಿಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ನನ್ನನ್ನು ಸಂಪರ್ಕಿಸಿ, ಎಲ್ಲವೂ ಒಪ್ಪಿಗೆಯಾದರೆ ಕೋಚ್ ಆಗಲು ಸಿದ್ಧ’ ಎಂದು ಹೇಳಿದ್ದಾರೆ.

ಐಪಿಎಲ್‌'ನಲ್ಲಿ ಈ ಮೊದಲು ಮುಂಬೈ ತಂಡದ ಕೋಚ್ ಆಗಿದ್ದ ಪಾಂಟಿಂಗ್, ಈ ಆವೃತ್ತಿಯಲ್ಲಿ ಡೆಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.