ಭಾರತದ ಸುದರಂ ರವಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಎರಡು ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಲಂಡನ್‌(ಜೂ.14): ಎಜ್‌'ಬಾಸ್ಟನ್‌'ನಲ್ಲಿ ಗುರುವಾರ ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯ 2ನೇ ಸೆಮಿಫೈನಲ್‌ ಪಂದ್ಯದ ತೀರ್ಪುಗಾರರಾಗಿ ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ಇಂಗ್ಲೆಂಡ್'ನ ರಿಚರ್ಡ್‌ ಕೆಟಲ್‌'ಬರೋ ಆಯ್ಕೆಯಾಗಿದ್ದಾರೆ.

ಕ್ರಿಸ್‌ ಬೋರ್ಡ್‌ ಮ್ಯಾಚ್‌ ರೆಫ್ರಿ, ನಿಗೆಲ್‌ ಲಾಂಗ್‌ 3ನೇ ಹಾಗೂ ರಿಚರ್ಡ್‌ ಇಲ್ಲಿಂಗ್‌'ವತ್‌'ರ್‍ 4ನೇ ಅಂಪೈರ್‌ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಆದರೆ ಜೂನ್ 18ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಇನ್ನೂ ಅಂಪೈರ್ ಅವರನ್ನು ನೇಮಕ ಮಾಡಿಲ್ಲ.

ಭಾರತದ ಸುದರಂ ರವಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಎರಡು ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.