ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಾರತದ ಅನುಭವಿ ಆಟಗಾರ ಯುವರಾಜ್ ಸಿಂಗ್ ಏನೆಲ್ಲಾ ಸಾಧಿಸಿರಬಹುದು. ಆದರೆ ಸೆ.19, 2007ರಂದು ಮೊದಲ ಟಿ20 ವಿಶ್ವಕಪ್'ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವಿ ಒಂದೇ ಓವರ್'ನಲ್ಲಿ ಆರು ಸಿಕ್ಸರ್ ಬಾರಿಸಿದ್ದು ಯಾರೂ ಮರೆಯಲು ಸಾಧ್ಯವಿಲ್ಲ.

ದಕ್ಷಿಣ ಆಫ್ರಿಕಾದ ಕಿಂಗ್ಸ್'ಮೇಡ್'ನಲ್ಲಿ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ಆರು ಎಸೆತದಲ್ಲಿ ಸತತ ಆರು ಸಿಕ್ಸರ್ ಸಿಡಿಸಿ ವಿನೂತನ ದಾಖಲೆ ನಿರ್ಮಿಸಿ, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿ ಇಂದಿಗೆ 9 ವರ್ಷ ತುಂಬಿದೆ.

 

ಇಂಗ್ಲೆಂಡ್ ಆಲ್ರೌಂಡರ್ ಆ್ಯಂಡ್ರೊ ಫ್ಲಿಂಟಾಪ್ ರೇಗಿಸಿದಕ್ಕೆ ಕೆರಳಿದ ಯುವಿ ನಂತರದ ಬೌಲಿಂಗ್ ಮಾಡಿದ ಸ್ಟುವರ್ಟ್ ಬ್ರಾಡ್ ಎಸೆತ ಆರೂ ಎಸೆತಗಳನ್ನು ಸಿಕ್ಸರ್ ಗಡಿ ಮುಟ್ಟಿಸಿದ್ದು ಮಾತ್ರವಲ್ಲದೇ, ಟಿ20 ಕ್ರಿಕೆಟ್'ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಇದರ ಜೊತೆಗೆ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲೂ ಯುವಿ ಮಹತ್ವದ ಪಾತ್ರ ವಹಿಸಿದ್ದರು.