ಧೋನಿ ಟೀಂ ಇಂಡಿಯಾ ನಾಯಕತ್ವವನ್ನ ತ್ಯಜಿಸಿ ವಾರ ಕಳೆದಿದೆ. ವಿರಾಟ್ ಕೊಹ್ಲಿಗೆ ಪಟ್ಟಾಭಿಷೇಕವನ್ನೂ ಮಾಡಲಾಗಿದೆ. ಆದ್ರೆ ಸದ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬ ನೀಡಿರುವ ಹೇಳಿಕೆ ಧೋನಿ ನಾಯಕತ್ವ ತ್ಯಜಿಸುವ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಅಷ್ಟಕ್ಕೂ ಆ ಅಧಿಕಾರಿ ಹೇಳಿದ್ದಾದ್ರು ಏನು..? ಧೋನಿ ನಾಯಕತ್ವ ತ್ಯಜಿಸುವ ಕುರಿತ ಇನ್ಸೈಡ್ ಸ್ಟೋರಿ ಇಲ್ಲಿದೆ.
ನವದೆಹಲಿ(ಜ.10): ಧೋನಿ ಟೀಂ ಇಂಡಿಯಾ ನಾಯಕತ್ವವನ್ನ ತ್ಯಜಿಸಿ ವಾರ ಕಳೆದಿದೆ. ವಿರಾಟ್ ಕೊಹ್ಲಿಗೆ ಪಟ್ಟಾಭಿಷೇಕವನ್ನೂ ಮಾಡಲಾಗಿದೆ. ಆದ್ರೆ ಸದ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬ ನೀಡಿರುವ ಹೇಳಿಕೆ ಧೋನಿ ನಾಯಕತ್ವ ತ್ಯಜಿಸುವ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಅಷ್ಟಕ್ಕೂ ಆ ಅಧಿಕಾರಿ ಹೇಳಿದ್ದಾದ್ರು ಏನು..? ಧೋನಿ ನಾಯಕತ್ವ ತ್ಯಜಿಸುವ ಕುರಿತ ಇನ್ಸೈಡ್ ಸ್ಟೋರಿ ಇಲ್ಲಿದೆ.
ದಶಕಗಳ ಕಾಲ ಆಳಿದ ದೊರೆಗೆ ಅವಮಾನ..?: ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ
ಟೀಂ ಇಂಡಿಯಾವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿ, ಪರಿಪೂರ್ಣ ನಾಯಕ ಎನಿಸಿಕೊಂಡಿದ್ದ ಧೋನಿ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಕ್ರಿಕೆಟ್ ಸಂಸ್ಥೆಯೊಂದರ ಅಧಿಕಾರಿ ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಯಾಗುತ್ತಿದೆ.
ಧೋನಿಗೆ ನಾಯಕತ್ವ ತ್ಯಜಿಸುವ ಯೋಚನೆ ಇರಲಿಲ್ವಾ..?
ದಶಕಗಳ ಕಾಲ ಆಪತ್ಬಾಂದವನಾಗಿದ್ದ ಧೋನಿಗೆ ಅವಮಾನ ಮಾಡಲಾಗಿದ್ಯಾ..? ಟೀಂ ಇಂಡಿಯಾದ ನಾಯಕತ್ವವನ್ನ ಧೋನಿ ತ್ಯಜಿಸುವ ಯೋಚನೆಯೇ ಮಾಡಿರಲಿಲ್ವಾ.? ಬಿಸಿಸಿಐನ ಪದಾದಿಕಾರಿಯೊಬ್ಬ ಧೋನಿಗೆ ಹಿಂಸೆ ನೀಡಿ ನಾಯಕತ್ವವನ್ನ ತ್ಯಜಿಸುವಂತೆ ಮಾಡಿದ್ರಾ..?
ಆದಿತ್ಯ ವರ್ಮಾ ಸಿಡಿಸಿದ ಧೋನಿ ಬಾಂಬ್
ಇದು ನಾವು ಹೇಳುತ್ತಿರುವುದು ಕಥೆಯಲ್ಲ. ಬಿಹಾರ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆದಿತ್ಯ ಸಿಡಿಸಿರುವ ಬಾಂಬ್. ಧೋನಿ ನಾಯಕತ್ವವನ್ನ ತ್ಯಜಿಸುವ ಹಾಗೆ ಮಾಡಿದ್ದು ಬಿಸಿಸಿಐನ ಒಬ್ಬ ಅಧಿಕಾರಿ ಎಂದು ಆದಿತ್ಯ ವರ್ಮಾ ಬಿಸಿಸಿಐನತ್ತ ಬೊಟ್ಟು ಮಾಡಿದ್ದಾರೆ.
ನಾಯಕತ್ವ ಬದಲಾವಣೆಗೆ ಬಿಸಿಸಿಐ ಸ್ಕೆಚ್..?: ಬಿಸಿಸಿಐ ಸೂತ್ರಧಾರಿ.. ಪ್ರಸಾದ್ ಪಾತ್ರಧಾರಿನಾ..?
ಪ್ರಿಯಾ ವೀಕ್ಷಕರೇ. ನಿಮಗೆ ನೆನಪಿರಬಹುದು. ಮಹಿ ತಮ್ಮ ರಾಜ್ಯ ಜಾರ್ಖಂಡ್ ತಂಡದ ಮೆಂಟರ್ ಆಗಿದ್ರು. ಗುಜರಾತ್ ವಿರುದ್ಧದ ರಣಜಿ ಸೆಮಿಫೈನಲ್ನಲ್ಲಿ ತಂಡದ ಒಟ್ಟಿಗೆ ಇದ್ರು. ಈ ವೇಳೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಕೂಡ ಪಂದ್ಯ ವೀಕ್ಷಿಸಲು ನಾಗ್ಪುರಕ್ಕೆ ಬಂದಿದ್ರು. ಆಗಲೇ ಸಣ್ಣದೊಂದು ಅನುಮಾನ ಆದಿತ್ಯವರ್ಮಾರಿಗೆ ಬಂದಿತ್ತಂತೆ.
5 ದಿನಗಳ ಪಂದ್ಯದಲ್ಲಿ ಎಂ.ಎಸ್.ಕೆ ಪ್ರಸಾದ್ ಹಾಗೂ ಧೋನಿ ಹೆಚ್ಚು ಮಾತುಕತೆ ನಡೆಸಿದ್ದರು. ಆದ್ರೆ ಜಾರ್ಖಂಡ್ ಸೋಲುವವರೆಗೆ ಧೋನಿಯ ನಾಯಕತ್ವದ ಬಗ್ಗೆ ಪ್ರಸಾದ್ ಬಾಯಲ್ಲಿಯಾಗಲಿ ಮಹಿಯಿಂದಾಗಲಿ ಪ್ರಸ್ತಾಪವಾಗಿರಲಿಲ್ಲ. ಆದ್ರೆ ಜಾರ್ಖಂಡ್ ಸೋಲುತ್ತಿದಂತೆ ಧೋನಿ ನಾಯಕತ್ವ ತ್ಯಜಿಸಿದ್ರು ಎಂದು ಬಿಸಿಸಿಐ ಹೇಳಿಬಿಟ್ಟಿತ್ತು.
ಧೋನಿಗೆ ಟಾರ್ಚರ್ ನೀಡಿದ್ರಾ ಎಂ ಎಸ್ಕೆ..?
ಕ್ಯಾಪ್ಟನ್ಸಿ ತೊರೆಯುವ ನಿರ್ಧಾರದ ಬಗ್ಗೆ ಯಾವುದೇ ಯೋಚನೆ ಇಲ್ಲದಿದ್ದ ಧೋನಿ ಏಕಾಏಕಿ ಅಂದು ರಾಜೀನಾಮೆ ನೀಡಿದ್ದಾರೂ ಏಕೆ ಎಂದು ವಿಚಾರಿಸಿದ ಆದಿತ್ಯ ವರ್ಮಾಗೆ ಶಾಕ್ ಆಗಿತ್ತಂತೆ. ಜಾರ್ಖಂಡ್ ಸೋಲುತ್ತಿದಂತೆ ಬಿಸಿಸಿಐನ ಜಂಟಿ ಕಾರ್ಯದರ್ಶಿ ಅಮಿತಾಬ್ ಚೌಧರಿ, ಎಂ.ಎಸ್.ಕೆ ಪ್ರಸಾದ್ಗೆ ಕರೆ ಮಾಡಿ ಧೋನಿಯ ಮುಂದಿನ ನಡೆ ಬಗ್ಗೆ ವಿಚಾರಿಸುವಂತೆ ಹೇಳಿದ್ರಂತೆ. ಎಂ.ಎಸ್.ಕೆ ಪ್ರಸಾದ್ ತಡಮಾಡದೆ ಜಾರ್ಖಂಡ್ ಸೋಲಿನ ನೋವಿನಲ್ಲಿದ್ದ ಧೋನಿಯನ್ನ ಇನ್ನಿಲ್ಲದಂತೆ ಹಿಂಸಿಸಿದರಂತೆ. ಇದರಿಂದ ವಿಚಲಿತರಾದ ಧೋನಿ OK, THATS IT ಎಂದು ಹೇಳಿದ್ರಂತೆ.
ದಿಗ್ಗಜ ನಾಯಕರ ಹಾದಿಯಲ್ಲಿ ಧೋನಿ
ಹಾಗಾದ್ರೆ ಎಂ.ಎಸ್.ಕೆ ಪ್ರಸಾದ್ ನಾಗ್ಪುರಕ್ಕೆ ಹೋಗಿದ್ದೆ ಧೋನಿಗೆ ನಾಯಕತ್ವ ತ್ಯಜಿಸುವಂತೆ ಹೇಳೋದಕ್ಕ.? ಬಿಸಿಸಿಐ ಈ ಮೊದಲೇ ನಾಯಕತ್ವ ಬದಲಾವಣೆ ಬಗ್ಗೆ ಯೋಚನೆ ಮಾಡಿಬಿಟ್ಟಿತ್ತಾ..? ದಶಕಗಳ ಕಾಲ ಭಾರತವನ್ನ ಹೆಗಲ ಮೇಲೆ ಹೊತ್ತು ಮೆರಸಿದ್ದ ಮಹಾನ್ ನಾಯಕನಿಗೆ ಬಲವಂತವಾಗಿ ನಾಯಕನ ಪಟ್ಟ ಕಿತ್ತುಕೊಳ್ಳುವ ಮೂಲಕ ಅವಮಾನ ಮಾಡಿದ್ರಾ..? ಗೊತ್ತಿಲ್ಲ. ಆದ್ರೆ ಇದು ನಿಜವಾಗಿದ್ರೆ ಬಿಸಿಸಿಐಯ ಈ ನಡೆಯನ್ನ ಟೀಂ ಇಂಡಿಯಾದ ಅಭಿಮಾನಿಗಳು ಎಂದೂ ಕ್ಷಮಿಸುವುದಿಲ್ಲ.
ಧೋನಿ ನಾಯಕನಾಗಿ ಇಂದು ಕೊನೆ ಪಂದ್ಯ..!
ಹೌದು, ಇಂದು ಬ್ಲ್ಯೂ ಜರ್ಸಿ ಹಾಕಿಕೊಂಡು ಧೋನಿ ಕೊನೆ ಸಲ ಟೀಮ್ ಇಂಡಿಯಾವನ್ನ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಫಸ್ಟ್ ಪ್ರಾಕ್ಟೀಸ್ ಮ್ಯಾಚ್ನಲ್ಲಿ ಇಂದು ಇಂಡಿಯಾ ‘ಎ’ ಟೀಮ್ ಅನ್ನ ಲೀಡ್ ಮಾಡಲಿದ್ದಾರೆ. ಗಾಯಾಳು ಮತ್ತು ಸುದೀರ್ಘ ವಿಶ್ರಾಂತಿಯಲ್ಲಿದ್ದ ಆಟಗಾರರಿಗೆ ಈ ಪ್ರಾಕ್ಟೀಸ್ ಮ್ಯಾಚ್ ಮಹತ್ವದ್ದು. ಹಾಗೆ ಧೋನಿಗೂ ಕೂಡ. ಸೋ ಮಹಿ ಕ್ಯಾಪ್ಟನ್ಸಿಯ ಕೊನೆ ಮ್ಯಾಚ್ ಮಿಸ್ ಮಾಡ್ಕೋಬೇಡಿ.
