ಜೈಪುರ: ಹ್ಯಾಟ್ರಿಕ್ ಸೋಲಿನ ಬಳಿಕ ಪುಟಿದೆದ್ದಿರುವ ಮುಂಬೈ ಇಂಡಿಯನ್ಸ್, ಜಯದ ಹಳಿಯಲ್ಲಿ ಮುಂದುವರಿಯುವ ವಿಶ್ವಾಸದಲ್ಲಿದೆ.

ಸತತ ಸೋಲಿನಿಂದ ಕುಗ್ಗಿರುವ ರಾಜಸ್ಥಾನ ರಾಯಲ್ಸ್ ಮೇಲೆ ಸವಾರಿ ಮಾಡಲು ರೋಹಿತ್ ಪಡೆ ಕಾತರಿಸುತ್ತಿದೆ. ರಾಜಸ್ಥಾನ ಪಾಲಿಗೆ ಭದ್ರಕೋಟೆ ಎನಿಸಿದ್ದ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ತಂಡ ಸೋಲಿನ ಮೇಲೆ ಸೋಲುಕಾಣುತ್ತಿದೆ. ದೊಡ್ಡ ಮೊತ್ತ ನೀಡಿ ಖರೀದಿಸಿದ ಆಟಗಾರರೆಲ್ಲರೂ ವೈಫಲ್ಯ ಮುಂದುವರಿಸಿರುವುದು ರಾಯಲ್ಸ್ ತಲೆನೋವು ಹೆಚ್ಚಿಸಿದೆ.

ಆರ್‌'ಸಿಬಿ ವಿರುದ್ಧ ಅಬ್ಬರಿಸಿ ರೋಹಿತ್ ಶರ್ಮಾ ಲಯಕ್ಕೆ ಮರಳಿರುವುದು ಮುಂಬೈ ಬಲ ಹೆಚ್ಚಿಸಿದೆ. ಪೊಲ್ಲಾರ್ಡ್ ಗಾಯದಿಂದ ಚೇತರಿಸಿಕೊಂಡಿದ್ದು ಕಣಕ್ಕಿಳಿಯಲು ಸಿದ್ಧರಿದ್ದಾರೆ. ಲೆಗ್ ಸ್ಪಿನ್ನರ್ ಮಯಾಂಕ್ ಮರ್ಕಂಡೆ, ಮುಂಬೈ ಪಾಲಿನ ಟ್ರಂಪ್ ಕಾರ್ಡ್ ಎನಿಸಿದ್ದಾರೆ.

ಸಂಭಾವ್ಯ ತಂಡ:

RR

ಅಜಿಂಕ್ಯ ರಹಾನೆ, ಕ್ಲಾಸೆನ್, ಸಂಜು ಸ್ಯಾಮ್ಸನ್, ಸ್ಟೋಕ್ಸ್, ತ್ರಿಪಾಠಿ, ಬಟ್ಲರ್, ಬಿನ್ನಿ, ಕೆ.ಗೌತಮ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್, ಲಾಫ್‌'ಲಿನ್

MI

ಸೂರ್ಯ ಕುಮಾರ್, ಲೀವಿಸ್, ಇಶಾನ್, ರೋಹಿತ್, ಕೃನಾಲ್, ಪೊಲ್ಲಾರ್ಡ್, ಹಾರ್ದಿಕ್, ಮೆಕ್ಲೆನಘಾನ್, ಮಯಾಂಕ್ ಮರ್ಕಂಡೆ, ಬುಮ್ರಾ, ಮುಸ್ತಾಫಿಜುರ್.

ಪಂದ್ಯ ಆರಂಭ: ಸಂಜೆ- 8 ಗಂಟೆಗೆ