ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ; ಶ್ರೇಯಸ್, ಪೃಥ್ವಿ ಶಾ ಮೇಲೆ ಹೆಚ್ಚಿದ ನಿರೀಕ್ಷೆ

Resurgent Daredevils take on Chennai in crucial battle
Highlights

ಭಾನುವಾರ ಸನ್‌'ರೈಸರ್ಸ್‌ ಗೆದ್ದಿದ್ದರಿಂದ 2ನೇ ಸ್ಥಾನಕ್ಕಿಳಿದಿರುವ ಚೆನ್ನೈ ಈ ಪಂದ್ಯ ಗೆದ್ದು ಮತ್ತೊಮ್ಮೆ ನಂ.1 ಸ್ಥಾನಕ್ಕೇರುವ ಗುರಿ ಹೊಂದಿದೆ. ಇದರೊಂದಿಗೆ ತಂಡ ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಡೆಲ್ಲಿ ಡೇರ್‌ಡೆವಿಲ್ಸ್ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದಿದೆ. ತಂಡ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಮುಂದಿನ ಏಳೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ.

ಪುಣೆ[ಏ.30] ನೂತನ ನಾಯಕ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಗೆಲುವಿನ ರುಚಿ ನೋಡಿರುವ ಡೆಲ್ಲಿ ಡೇರ್‌'ಡೆವಿಲ್ಸ್'ಗೆ ಎಂ.ಎಸ್.ಧೋನಿಯ ಚೆನ್ನೈ ಸವಾಲು ಎದುರಾಗಲಿದೆ. 2ನೇ ತವರು ಪುಣೆಯಲ್ಲಿ ಶುಭಾರಂಭ ಮಾಡಿದ್ದ ಚೆನ್ನೈ, ಕಳೆದ ಪಂದ್ಯದಲ್ಲಿ ಮುಂಬೈಗೆ ಶರಣಾಗಿತ್ತು.
ಭಾನುವಾರ ಸನ್‌'ರೈಸರ್ಸ್‌ ಗೆದ್ದಿದ್ದರಿಂದ 2ನೇ ಸ್ಥಾನಕ್ಕಿಳಿದಿರುವ ಚೆನ್ನೈ ಈ ಪಂದ್ಯ ಗೆದ್ದು ಮತ್ತೊಮ್ಮೆ ನಂ.1 ಸ್ಥಾನಕ್ಕೇರುವ ಗುರಿ ಹೊಂದಿದೆ. ಇದರೊಂದಿಗೆ ತಂಡ ಪ್ಲೇ-ಆಫ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಡೆಲ್ಲಿ ಡೇರ್‌ಡೆವಿಲ್ಸ್ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದಿದೆ. ತಂಡ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಮುಂದಿನ ಏಳೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಎಲ್ಲಾ ತಂಡಗಳಿಗಿಂತ ಕಳಪೆ ನೆಟ್ ರನ್‌ರೇಟ್ ಹೊಂದಿರುವ ಕಾರಣ, ಪ್ರತಿ ಪಂದ್ಯದಲ್ಲೂ ಉತ್ತಮ ಅಂತರದಲ್ಲಿ ಜಯ ಕಾಣಬೇಕಿದೆ. ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ಕಾಲಿನ್ ಮನ್ರೊ ಹಾಗೂ ಗ್ಲೆನ್ ಮ್ಯಾಕ್ಸ್‌'ವೆಲ್ ಕಳೆದ ಪಂದ್ಯದಲ್ಲಿ ಉತ್ತಮ ಲಯ ಪ್ರದರ್ಶಿಸಿದ್ದು, ಅದೇ ಲಯ ಮುಂದುವರಿಸಬೇಕಿದೆ. ಆವೇಶ್ ಖಾನ್, ಟ್ರೆಂಟ್ ಬೌಲ್ಟ್, ಲಿಯಾಮ್ ಪ್ಲೆಂಕೆಟ್ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಸ್ಪಿನ್ನರ್‌'ಗಳ ಸಮಸ್ಯೆ ಎಂದಿನಂತೆ ಮುಂದುವರಿದಿದೆ.
ಚೆನ್ನೈಗೆ ಬೌಲರ್‌ಗಳ ಸಮಸ್ಯೆ: ಮತ್ತೊಂದೆಡೆ ಚೆನ್ನೈ, ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಆದ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. ರಾಯುಡು, ರೈನಾ, ಧೋನಿ, ಬ್ರಾವೋ, ವಾಟ್ಸನ್, ಬಿಲ್ಲಿಂಗ್ಸ್ ಇರುವ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದರೂ ಬೌಲಿಂಗ್ ವಿಭಾಗದಲ್ಲಿ ತಂಡ ದುರ್ಬಲಗೊಳ್ಳುತ್ತಿದೆ. ದೀಪಕ್ ಚಾಹರ್ ಗಾಯಗೊಂಡು 2 ವಾರ ವಿಶ್ರಾಂತಿಗೆ ತೆರಳಿದ್ದಾರೆ. ಶಾರ್ದೂಲ್ ಠಾಕೂರ್ ಸ್ಥಿರತೆ ಕಳೆದುಕೊಂಡಿದ್ದು, ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಮ್ರಾನ್ ತಾಹಿರ್ ದುಬಾರಿಯಾಗುತ್ತಿರುವ ಕಾರಣ, ಅವರ ಸ್ಥಾನದಲ್ಲಿ ಆಫ್ರಿಕಾ ವೇಗಿ ಲುಂಗಿಸನಿ ಎನ್‌'ಗಿಡಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ, ಕೇರಳ ವೇಗಿ ಕೆ.ಎಂ. ಆಸಿಫ್‌'ಗೆ
ಅವಕಾಶ ದೊರೆಯಬಹುದು ಎನ್ನುವ ಲೆಕ್ಕಾಚಾರವಿದೆ. ಡೆಲ್ಲಿ ಡೇರ್ ಡೆವಿಲ್ಸ್ ಪಾಲಿಗಿದು ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಪಂದ್ಯಾವಳಿ ಪ್ರಮುಖ ಘಟ್ಟ ತಲುಪುತ್ತಿರುವಾಗ ದುರ್ಬಲಗೊಂಡಿರುವ ಬೌಲಿಂಗ್ ವಿಭಾಗವನ್ನು ಸರಿಪಡಿಸಿಕೊಳ್ಳುವುದು ಚೆನ್ನೈ ಮುಂದಿರುವ ಗುರಿಯಾಗಿದೆ. 

loader