ಇದೇ ವೇಳೆ ತಂಡ ನನಗೆ ನೀಡುವ ಪ್ರತಿಯೊಂದು ಜವಾಬ್ದಾರಿಗೂ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ, ಒಟ್ಟಾರೆ ನನ್ನ ಪ್ರದರ್ಶನದ ಬಗ್ಗೆ ನನಗೆ ತೃಪ್ತಿಯಿದೆ’ ಎಂದು ರಹಾನೆ ಹೇಳಿದ್ದಾರೆ. ರಹಾನೆ ಏಕದಿನ ಸರಣಿಯಲ್ಲಿ ಸತತ 4 ಅರ್ಧಶತಕಗಳ ನೆರವಿನಿಂದ 244 ರನ್ ಬಾರಿಸಿದ್ದರು.

ನವದೆಹಲಿ(ಅ.03): ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ, ಅಜಿಂಕ್ಯ ರಹಾನೆ ಅವರನ್ನು ಟಿ20 ತಂಡದಿಂದ ಕೈಬಿಟ್ಟಿರುವ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಆಯ್ಕೆಗಾರರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಾವು ಹೆಚ್ಚೆಚ್ಚು ಪಂದ್ಯಗಳನ್ನು ಆಡುತ್ತೇವೆ. ತಂಡದ ಆಡಳಿತ, ಆಯ್ಕೆಗಾರರು ನನ್ನನ್ನು ಆಡಿಸದಿರಲು ನಿರ್ಧರಿಸಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ತಂಡದಲ್ಲಿ ಸ್ಪರ್ಧೆ ಹೆಚ್ಚಾದಷ್ಟು, ನಮ್ಮಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಇನ್ನಷ್ಟು ಉತ್ತಮ ಪ್ರದರ್ಶನ ತೋರಬೇಕು ಎನ್ನುವ ಗುರಿ ಹೊಂದಲು ನೆರವಾಗುತ್ತದೆ ಎಂದು ರಹಾನೆ ಹೇಳಿದ್ದಾರೆ