ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಟೂರ್ನಿಯಲ್ಲಿ ಲಿಯಾಂಡರ್ ಪೇಸ್ ಯುವ ಆಟಗಾರ ಸಾಕೇತ್ ಮೈನೇನಿ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
ಮುಂಬೈ(ಜ.24): ಭಾರತದ ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಯ ಬಳಿಕ ವೃತ್ತಿ ಜೀವನದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ಆಲ್ ಇಂಡಿಯಾ ಟೆನಿಸ್ ಸಂಸ್ಥೆ (ಎಐಟಿಎ) ಹೇಳಿದೆ.
43 ವರ್ಷ ವಯಸ್ಸಿನ ಪೇಸ್, ಡೇವಿಸ್ ಕಪ್ ಟೂರ್ನಿಯ ಡಬಲ್ಸ್‌ನಲ್ಲಿ 42 ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ 63ನೇ ಶ್ರೇಯಾಂಕ ಹೊಂದಿರುವ ಪೇಸ್ ಏಷ್ಯಾ-ಒಶಿನಿಯಾ ಟೂರ್ನಿಗೂ ಮುನ್ನ ನಿವೃತ್ತಿ ಹೇಳಬಹುದು. ಹೀಗಾಗಿ ಡೇವಿಸ್ ಕಪ್ ಟೂರ್ನಿ ಪೇಸ್'ಗೆ ಅಂತಿಮ ಪಂದ್ಯಾವಳಿಯಾಗಬಹುದು. 27 ವರ್ಷಗಳಿಂದ ದೇಶದ ಪರವಾಗಿ ಡೇವಿಸ್ ಕಪ್'ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಪೇಸ್ ದಾಖಲೆ ನಿರ್ಮಿಸುವ ದೃಷ್ಠಿಯಿಂದ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಎಐಟಿಎ ಹಿರಿಯ ಉಪಾಧ್ಯಕ್ಷ ಭರತ್ ಓಜಾ ಸ್ಪಷ್ಟಪಡಿಸಿದ್ದಾರೆ.
ಒಟ್ಟು 18 ಗ್ರ್ಯಾನ್'ಸ್ಲಾಮ್(10 ಮಿಶ್ರ ಡಬಲ್ಸ್, 8 ಪುರುಷರ ಡಬಲ್ಸ್) ಗೆದ್ದಿರುವ ಪೇಸ್ ಪ್ರಸ್ತುತ ಆಸ್ಟ್ರೇಲಿಯಾ ಓಪನ್'ನಲ್ಲಿ ಮಾರ್ಟೀನಾ ಹಿಂಗಿಸ್ ಜೋತೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಡೇವಿಸ್ ಕಪ್ ಟೂರ್ನಿಯಲ್ಲಿ ಲಿಯಾಂಡರ್ ಪೇಸ್ ಯುವ ಆಟಗಾರ ಸಾಕೇತ್ ಮೈನೇನಿ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ.
