ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಿತ ಕ್ರಿಕೆಟ್ ಸಲಹಾ ಸಮಿತಿ ಮಾಜಿ ನಾಯಕ ರವಿ ಶಾಸ್ತ್ರಿ(55) ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಜಾಹೀರ್ ಕಾನ್ ಅವರನ್ನು ನೇಮಕ ಮಾಡಿದೆ. ಆದರೆ ಕೋಚ್ ಹುದ್ದೆಗೆ ಹಲವಾರು ಮಂದಿ ಅರ್ಜಿ ಹಾಕಿದ್ದರೂ ರವಿಶಾಸ್ತ್ರಿಯನ್ನೇ ಏಕೆ ಕೋಚ್ ಆಗಿ ನೇಮಿಸಿದರು ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರಿಸಬಲ್ಲ 5 ಅಂಶಗಳು ಈ ಕೆಳಗಿನಂತಿವೆ
ಮುಂಬೈ(ಜು.12): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಿತ ಕ್ರಿಕೆಟ್ ಸಲಹಾ ಸಮಿತಿ ಮಾಜಿ ನಾಯಕ ರವಿ ಶಾಸ್ತ್ರಿ(55) ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ಜಾಹೀರ್ ಕಾನ್ ಅವರನ್ನು ನೇಮಕ ಮಾಡಿದೆ. ಆದರೆ ಕೋಚ್ ಹುದ್ದೆಗೆ ಹಲವಾರು ಮಂದಿ ಅರ್ಜಿ ಹಾಕಿದ್ದರೂ ರವಿಶಾಸ್ತ್ರಿಯನ್ನೇ ಏಕೆ ಕೋಚ್ ಆಗಿ ನೇಮಿಸಿದರು ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರಿಸಬಲ್ಲ 5 ಅಂಶಗಳು ಈ ಕೆಳಗಿನಂತಿವೆ
1. ಕೊಹ್ಲಿಯ ಫೇವರಿಟ್!:
ತಂಡದ ನಿರ್ದೇಶಕರಾಗಿ ಶಾಸ್ತ್ರಿ ಆಟಗಾರರ ಗೌರವ ಸಂಪಾದಿಸಿದ್ದರು. ಪ್ರಮುಖವಾಗಿ ವಿರಾಟ್ ಕೊಹ್ಲಿಯೊಂದಿಗೆ ಅವರ ಬಾಂಧವ್ಯ ಸರಣಿಯಿಂದ ಸರಣಿಗೆ ಉತ್ತಮಗೊಳ್ಳುತ್ತಾ ಸಾಗಿತ್ತು. ಆಟಗಾರರಿಗೆ ಅವರ ಇಚ್ಛೆಯಂತೆ ಆಡಲು ಶಾಸ್ತ್ರಿ ಸ್ವತಂತ್ರ ನೀಡಿದ್ದರು. ಅಲ್ಲದೇ ತಂಡದ ಆತ್ಮವಿಶ್ವಾಸ ಕುಗಿದಾಗ, ಆಟಗಾರರನ್ನು ಹುರಿದುಂಬಿಸುವಲ್ಲಿ ಅವರ ನಿಸ್ಸೀಮರಾಗಿದ್ದರು. ಅವರ ಕಾರ್ಯವೈಖರಿ ಆಟಗಾರರ ಮೆಚ್ಚುಗೆಗೆ ಕಾರಣವಾಗಿತ್ತು. ಅನಿಲ್ ಕುಂಬ್ಳೆಯಂತಹ ದಿಗ್ಗಜ ಆಟಗಾರನ ಕೈಯಲ್ಲಿ ತಂಡವನ್ನು 12 ತಿಂಗಳುಗಳ ಕಾಲ ನಿರ್ವಹಿಸಲು ಸಾಧ್ಯವಾಗಲಿಲ್ಲ. ಆದರೆ ಶಾಸ್ತ್ರಿ 22 ತಿಂಗಳು ತಂಡವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.
2) ಶಾಸ್ತ್ರಿ ಬೆನ್ನಿಗೆ ಸಚಿನ್!:
ಕುಂಬ್ಳೆ ದಿಢೀರ್ ರಾಜೀನಾಮೆ ನೀಡಿದ ಬಳಿಕ ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಿತ್ತು. ಈ ವೇಳೆ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್ ಲಂಡನ್‌ನಲ್ಲಿ ಭಾರತ ತಂಡದ ಆಟಗಾರರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದರು ಎನ್ನಲಾಗಿತ್ತು. ಅಲ್ಲದೇ ಲಂಡನ್‌ನಲ್ಲೇ ರವಿ ಶಾಸ್ತ್ರಿ ಅವರನ್ನು ಭೇಟಿ ಮಾಡಿ, ಕೋಚ್ ಹುದ್ದೆಗೆ ಅರ್ಜಿ ಹಾಕುವಂತೆ ಮನವಿ ಮಾಡಿದ್ದರು.
3) ಡೈರೆಕ್ಟರ್ ಆಗಿ ಸಾಧನೆ:
ಶಾಸ್ತ್ರಿ ಮಾಗದರ್ಶನದಲ್ಲಿ ಭಾರತ 2015ರ ಏಕದಿನ ಹಾಗೂ 2016ರ ಟಿ೨೦ ವಿಶ್ವಕಪ್ ಸೆಮೀಸ್ ಪ್ರವೇಶಿಸಿತ್ತು. ಅಲ್ಲದೇ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲುವು, ತವರಿನಲ್ಲಿ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಜಯ, ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯನ್ನು ಗೆದ್ದಿತ್ತು. ಅವರು ನಿರ್ದೇಶಕರಾಗಿದ್ದಾಗ ತಂಡ 21 ಟಿ20 ಪಂದ್ಯಗಳಲ್ಲಿ 14ರಲ್ಲಿ ಜಯ ಸಾಧಿಸಿತ್ತು. ಇನ್ನು 40 ಏಕದಿನ ಪಂದ್ಯಗಳಲ್ಲಿ 24ರಲ್ಲಿ ಗೆಲುವು, 12 ಟೆಸ್ಟ್‌ಗಳಲ್ಲಿ ೫ರಲ್ಲಿ ಗೆದ್ದು, 3ರಲ್ಲಿ ಸೋತಿತ್ತು.
4) ಬಿಸಿಸಿಐ ಜತೆ ಬಾಂಧವ್ಯ:
ಶಾಸ್ತ್ರಿ ಬಿಸಿಸಿಐ ಜತೆಗಿನ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೀಕ್ಷಕ ವಿವರಣೆ ವೇಳೆಯೂ ಅವರು ಬಿಸಿಸಿಐ ಆಡಳಿತವನ್ನು ಹೊಗಳಿರುವ ಉದಾಹರಣೆಗಳು ಸಾಕಷ್ಟಿವೆ. ಶಾಸ್ತ್ರಿಯನ್ನು ಬಿಸಿಸಿಐ ವಕ್ತಾರ ಎಂದೇ ಗೇಲಿ ಮಾಡಿದ್ದಿದೆ.
5) ನೆರವಾದ ಮುಂಬೈ ಲಾಬಿ:
ದಶಕಗಳಿಂದಲೂ ಭಾರತೀಯ ಕ್ರಿಕೆಟ್‌ನಲ್ಲಿ ಮುಂಬೈ ಆಟಗಾರರು, ಆಡಳಿತಗಾರರದ್ದೇ ಪ್ರಾಬಲ್ಯ. ಮುಂಬೈನ ಹಲವರಿಗೆ ಸಿಕ್ಕಿರುವಷ್ಟು ಅವಕಾಶ ಬೇರೆ ರಾಜ್ಯದವರಿಗೆ ಸಿಕ್ಕಿಲ್ಲ. ಮುಂಬೈನವರೇ ಆದ ಸಚಿನ್ ತೆಂಡುಲ್ಕರ್ ಆಯ್ಕೆಗಾರರಾಗಿದ್ದುದು ಇದಕ್ಕೆ ಇನ್ನಷ್ಟು ಬಲ ನೀಡಿತು.
