ಆರ್‌ಸಿಬಿ ತಂಡವನ್ನು ಭಾನುವಾರ ಕೇವಲ 49 ರನ್‌ಗಳಿಗೆ ಕಟ್ಟಿಹಾಕಿ ದಾಖಲೆ ಬರೆದ ಬಳಿಕ ಕೋಲ್ಕತಾ ತಂಡದ ನಾಯಕ ಗೌತಮ್‌ ಗಂಭೀರ್‌, ಹೋರಾಟಕ್ಕೆ ತಂಡವನ್ನು ಸಿದ್ಧಪಡಿಸಿದ್ದು ಹೇಗೆ ಅನ್ನುವ ಗುಟ್ಟನ್ನು ತೆರೆದಿಟ್ಟಿದ್ದಾರೆ.

ಬೆಂಗಳೂರು(ಎ.26): ಆರ್‌ಸಿಬಿ ತಂಡವನ್ನು ಭಾನುವಾರ ಕೇವಲ 49 ರನ್‌ಗಳಿಗೆ ಕಟ್ಟಿಹಾಕಿ ದಾಖಲೆ ಬರೆದ ಬಳಿಕ ಕೋಲ್ಕತಾ ತಂಡದ ನಾಯಕ ಗೌತಮ್‌ ಗಂಭೀರ್‌, ಹೋರಾಟಕ್ಕೆ ತಂಡವನ್ನು ಸಿದ್ಧಪಡಿಸಿದ್ದು ಹೇಗೆ ಅನ್ನುವ ಗುಟ್ಟನ್ನು ತೆರೆದಿಟ್ಟಿದ್ದಾರೆ.

‘ದಿ ಹಿಂದುಸ್ಥಾನ್‌ ಟೈಮ್ಸ್‌' ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ‘‘131 ರನ್‌ಗೆ ನೆಲಕಚ್ಚಿದ ಬಳಿಕ ನನ್ನ ಸಿಟ್ಟು ನೆತ್ತಿಗೇರಿತ್ತು. ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಪ್ರತಿಯೊಬ್ಬರ ಆಲೋಚನೆಗಳೂ ಕೇಳಿಸುವಷ್ಟುನಿಶಬ್ಧವಾಗಿತ್ತು'' ಎಂದಿರುವ ಗಂಭೀರ್‌ ‘‘ತಂಡವನ್ನು ಉದ್ದೇಶಿಸಿ ಮಾತನಾಡಿದ ನಾನು, ಈ ಹೋರಾಟದಲ್ಲಿ ಯಾರು ತೀವ್ರತೆ ಪ್ರದರ್ಶಿಸುವುದಿಲ್ಲವೋ, ಅವರು ಕೆಕೆಆರ್‌ ಪರ ಆಡುವುದು ಇದೇ ಕೊನೆ, ಕನಿಷ್ಠ ಪಕ್ಷ ನನ್ನ ನಾಯತ್ವದಲ್ಲಿ ಅವರಿಗೆ ಇನ್ಮುಂದೆ ಅವಕಾಶವಿರುವುದಿಲ್ಲ ಎಂದು ನಿಷ್ಠುರವಾಗಿ ಹೇಳಿದೆ. ಎಲ್ಲರ ಪರಿಶ್ರಮಕ್ಕೆ ಸಿಕ್ಕ ಬೃಹತ್‌ ಗೆಲುವುದು'' ಎಂದು ಬರೆದಿದ್ದಾರೆ.