ಇಂದಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಆದರೆ ಟೀಂ ಇಂಡಿಯಾದ ಆಯ್ಕೆ ಸಮಿತಿ ಮಾತ್ರ ಇಂದು ಕನ್ನಡಿಗ ಕೆ.ಎಲ್ ರಾಹುಲ್ನ ಮೇಲೆ ಹದ್ದಿನ ಕಣ್ಣಿಡಲಿದೆ. ಆತನ ಬ್ಯಾಟಿಂಗ್ ಅನ್ನ ಸಿರೀಯಸ್ಆಗಿ ವೀಕ್ಷಿಸಲಿದೆ. ಅಷ್ಟಕ್ಕೂ ಆಯ್ಕೆ ಸಮಿತಿ ರಾಹುಲ್ ಬಗ್ಗೆ ಅಷ್ಟು ತಲೆ ಕೆಡಸಿಕೊಳ್ಳಲು ಕಾರಣವೇನು..? ರಾಹುಲ್ ಮಾಡಿದ ತಪ್ಪಾದ್ರೂ ಏನು..? ಇಲ್ಲಿದೆ ವಿವರ
ಕೆ.ಎಲ್ ರಾಹುಲ್, ಸದ್ಯ ಟೀಂ ಇಂಡಿಯಾದ ಖಾಯಂ ಆಟಗಾರ. ಟೆಸ್ಟ್ , ಒನ್ಡೇ ಮತ್ತು ಟಿ20 ಮೂರು ಫಾರ್ಮೆಟ್ನಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ಮಾಹಾನ್ ಕ್ರಿಕೆಟಿಗ. ಆದ್ರೆ ರಾಹುಲ್ ಟೆಸ್ಟ್ ಫರ್ಮೆಟ್ ಬಿಟ್ರೆ ಹೆಚ್ಚು ಯಶಸ್ಸು ಗಳಿಸಿರೋದು ಟಿ20 ಕ್ರಿಕೆಟ್ನಲ್ಲಿ. ಬೆರಳೆಣಿಕೆಯಷ್ಟು ಪಂದ್ಯಗಳನ್ನಾಡಿದರೂ ವಿಶ್ವವವೇ ಮೆಚ್ಚುವಂಥಹ ಆಟವನ್ನಾಡಿದ್ದಾರೆ. ಅದರಲ್ಲೂ ಜಿಂಬಾಬ್ವೆ ವಿರುದ್ಧ ಈತ ಸಿಡಿಸಿದ ಶತಕ ಇನ್ನೂ ಅಭಿಮಾನಿಗಳ ಮನಸಿನಿಂದ ಮಾಸೇ ಇಲ್ಲ.
ಕೆ.ಎಲ್ ರಾಹುಲ್ರ ಟಿ20 ಪ್ರದರ್ಶನ ಇಂತಿದೆ. ಇದುವರೆಗೂ 8 ಟಿ20 ಪಂದ್ಯಗಳನ್ನಾಡಿರುವ ರಾಹುಲ್, 280 ರನ್ಗಳನ್ನ ಗಳಿಸಿದ್ದಾರೆ. 56ರ ಸರಾಸರಿಯಲ್ಲಿ ಬ್ಯಾಟ್ ಮಾಡಿ 150.53 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 1 ಶತಕ ಮತ್ತು 1 ಅರ್ಧ ಶತಕ ರಾಹುಲ್ ಟಿ20 ರೆಕಾರ್ಡ್ನಲ್ಲಿದೆ. ಜಿಂಬಾಬ್ವೆ ವಿರುದ್ಧ ಸಿಡಿಸಿದ 110 ಅವರ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ರಾಹುಲ್'ರ ಈ ರೆಕಾರ್ಡ್ ನೋಡಿದರೆ ರಾಹುಲ್ ಎಂಥ ಟಿ20 ಪ್ಲೇಯರ್ ಎನ್ನುವುದು ಗೊತ್ತಾಗುತ್ತದೆ. ಆದ್ರೆ ಇಷ್ಟೆಲ್ಲಾ ರೆಕಾರ್ಡ್ ಮಾಡಿದ್ರೂ ಕೆ.ಎಲ್ ರಾಹುಲ್'ಗೆ ಇಂದಿನ ಮ್ಯಾಚ್ನಲ್ಲಿ ತಮಬಾನೆ ಒತ್ತಡವಿದೆ. ತಂಡದಲ್ಲಿನ ಸ್ಥಾನಕ್ಕಾಗಿ ಹೋರಾಡಬೇಕಿದೆ. ಇಂದಿನ ಅವರ ಪ್ರದರ್ಶನದ ಮೇಲೆ ಅವರ ಕ್ರಿಕೆಟ್ ಭವಿಷ್ಯವೇ ಅಡಗಿದೆ.
ಉತ್ತಮ ರೆಕಾರ್ಡ್ ಹೊಂದಿದ್ರೂ ರಾಹುಲ್ಗೆ ಯಾಕೆ ಭಯ..?
ಅಷ್ಟಕ್ಕೂ ಕೆ.ಎಲ್ ರಾಹುಲ್ ಇಂದು ರಾಹುಲ್ ಒತ್ತಡದಲ್ಲಿರೋದ್ಯಕೆ ಗೊತ್ತಾ..? ತಂಡದಲ್ಲಿರುವ ಸಾಲು ಸಾಲು ಓಪನ್ನರ್'ಗಳು. ಹೌದು, ಟೀಂ ಇಂಡಿಯಾದಲ್ಲಿ ಸದ್ಯ ರಾಹುಲ್ ಸೇರಿದಂತೆ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು , ಅಜಿಂಕ್ಯಾ ರಹಾನೆ ಸೀಮಿತ ಓವರ್ಗಳ ಫಾರ್ಮೆಟ್'ನಲ್ಲಿ ಸ್ಥಾನ ಪಡೆದಿದ್ದಾರೆ. ಕೆ.ಎಲ್ ರಾಹುಲ್ನನ್ನ ಹೊರತು ಪಡಿಸಿದ್ರೆ ಇನ್ನೆಲ್ಲಾರೂ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆದ್ರೆ ಆಯ್ಕೆ ಸಮಿತಿ ನಾಲಕ್ಕು ಆರಂಭಿಕರನ್ನ ಪ್ರತೀ ಸರಣಿಯಲ್ಲೂ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಲ್ವರಲ್ಲಿ ಒಬ್ಬರಿಗೆ ಕೋಕ್ ಕೊಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದೇ ಕಾರಣಕ್ಕೆ ಎಂ.ಎಸ್.ಕೆ ಪ್ರಸಾದ್ ಕಣ್ಣು ರಾಹುಲ್ ಮೇಲೆ ಬಿದ್ದಿದೆ.
ಇದೇ ತಿಂಗಳು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಸರಣಿ ಆರಂಭವಾಗ್ತಿದೆ. ಈ ಮಹತ್ವದ ಸರಣಿಗೆ ನಾಲ್ವರು ಆರಂಭಿಕರನ್ನ ಆಯ್ಕೆ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ಆಯ್ಕೆ ಸಮಿತಿ ಫಾರ್ಮ್ ಕಳೆದುಕೊಂಡು ಪರದಾಡುತ್ತಿರುವ ರಾಹುಲ್ನನ್ನ ಇಂದು ಅಗ್ನಿ ಪರಿಕ್ಷೆಗೆ ದೂಡುತ್ತಿದೆ. ಇಂದು ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರ ರಾಹುಲ್ ಆಸೀಸ್ ವಿರುದ್ಧ ಆಡಲಿದ್ದಾರೆ. ಇಲ್ಲವಾದ್ರೆ ಸೀಮಿತ ಓವರ್ಗಳ ಫಾರ್ಮೆಟ್ನಿಂದಲೇ ಗೇಟ್ ಪಾಸ್ ಕೊಡಲಾಗುತ್ತೆ.
ಒಟ್ಟಿನಲ್ಲಿ ಇಂದು ಕನ್ನಡಿಗನ ಅಗ್ನಿ ಪರೀಕ್ಷೆ ನಡೆಯೋದಂತೂ ನಿಜ. ಈ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಉಳಿಗಾಲ ಇಲ್ಲವಾದ್ರೆ ಕೊಹ್ಲಿ ಭಂಟನಿಗೆ ಗೇಟ್ ಪಾಸ್ ಗ್ಯಾರೆಂಟಿ. ಆದ್ರೆ ಹಾಗಾಗದಿರಲಿ ನಮ್ಮ ಕನ್ನಡಿಗ ಇಂದು ನಡೆಯೋ ಪಾಸಾಗಲಿ ಎಂಬ ಪ್ರಾರ್ಥನೆ ಕೋಟ್ಯಅಂತರ ಕನ್ನಡಿಗರ ಪ್ರಾರ್ಥನೆ.
