ಎಬಿಡಿ, ವಿರಾಟ್ ಸ್ಫೋಟಕ ಆಟದಿಂದ ಆರ್'ಸಿಬಿಗೆ ಗೆಲುವು

First Published 12, May 2018, 11:39 PM IST
RCB Won By 5 Wickets
Highlights

ಡೆಲ್ಲಿ ನೀಡಿದ 181 ರನ್'ಗಳ ಸವಾಲನ್ನು ಬೆನ್ನಟ್ಟಿದ ವಿರಾಟ್ ಪಡೆ  19 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿದರು. ಆರಂಭದಲ್ಲಿಯೇ ಪಾರ್ಥಿವ್ ಪಟೇಲ್, ಮೋಹೀನ್ ಅಲಿ ವಿಕೇಟ್ ಕಳೆದುಕೊಂಡರೂ  ಕೋಹ್ಲಿ, ಎಬಿಡಿ ಜೋಡಿ 10.4 ಓವರ್ಗಳ ಜೊತೆಯಾಟದಲ್ಲಿ 118 ರನ್ ಪೇರಿಸಿದರು.       

ನವದೆಹಲಿ(ಮೇ.12): ಎಬಿಡಿ ವಿಲಿಯರ್ಸ್ ಹಾಗೂ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಆಟದಿಂದ ಆರ್'ಸಿಬಿ ತಂಡ ಡೆಲ್ಲಿ ಡೇರ್'ಡೇವಿಲ್ಸ್  ವಿರುದ್ಧ 5 ವಿಕೇಟ್'ಗಳ ಗೆಲುವು ಸಾಧಿಸಿದ್ದಾರೆ. 
ಡೆಲ್ಲಿ ನೀಡಿದ 181 ರನ್'ಗಳ ಸವಾಲನ್ನು ಬೆನ್ನಟ್ಟಿದ ವಿರಾಟ್ ಪಡೆ  19 ಓವರ್'ಗಳಲ್ಲಿ ಗೆಲುವಿನ ಗುರಿ ಮುಟ್ಟಿದರು. ಆರಂಭದಲ್ಲಿಯೇ ಪಾರ್ಥಿವ್ ಪಟೇಲ್, ಮೋಹೀನ್ ಅಲಿ ವಿಕೇಟ್ ಕಳೆದುಕೊಂಡರೂ  ಕೋಹ್ಲಿ, ಎಬಿಡಿ ಜೋಡಿ 10.4 ಓವರ್ಗಳ ಜೊತೆಯಾಟದಲ್ಲಿ 118 ರನ್ ಪೇರಿಸಿದರು.           
40 ಚಂಡುಗಳಲ್ಲಿ ಕೊಹ್ಲಿ 3 ಸಿಕ್ಸ್ 7 ಬೌಂಡರಿಯೊಂದಿಗೆ 70 ರನ್ ಬಾರಿಸಿದರೆ, ಎಬಿಡಿ 37 ಚಂಡುಗಳಲ್ಲಿ 6 ಸಿಕ್ಸ್ ಹಾಗೂ ೪ ಬೌಂಡರಿಯೊಂದಿಗೆ  72 ರನ್ ಸಿಡಿಸಿದರು.
ಈ ಮೊದಲು ಟಾಸ್ ಗೆದ್ದ ಬೆಂಗಳೂರು ತಂಡ ದೆಹಲಿ ತಂಡದ ಆಟಗಾರರನ್ನು ಬ್ಯಾಟಿಂಗ್ ಆಹ್ವಾನಿಸಿದರು. ಪಂತ್, ಅಭಿಷೇಕ್ ಶರ್ಮಾ ಸ್ಫೋಟಕ ಆರ್ಭಟ ಹಾಗೂ ಶ್ರೇಯಸ್ ಅಯ್ಯರ್ (32)ಸಮಯೋಚಿತ ಆಟದಿಂದ  20 ಓವರ್'ಗಳಲ್ಲಿ 181ರನ್ ಪೇರಿಸಿದರು.
34 ಚಂಡುಗಳನ್ನು ಎದುರಿಸಿದ ಪಂತ್  4 ಸಿಕ್ಸ್'ರ್,5 ಬೌಂಡರಿಯೊಂದಿಗೆ 61 ರನ್ ಸಿಡಿಸಿದರು. ಕೇವಲ 19 ಚಂಡುಗಳಲ್ಲಿ ಅಭಿಷೇಕ್ ಶರ್ಮಾ 4 ಸಿಕ್ಸ್'ರ್ 3 ಬೌಂಡರಿಯೊಂದಿಗೆ 46 ರನ್ ಚಚ್ಚಿದರು.

ಸ್ಕೋರ್ 
ಡೆಲ್ಲಿ ಡೇರ್ ಡೇವಿಲ್ಸ್ 20 ಓವರ್'ಗಳಲ್ಲಿ 181
(ರಿಶಬ್ ಪಂತ್ 61, ಅಬಿಷೇಕ್ ಶರ್ಮಾ 46) 

ಆರ್'ಸಿಬಿ 19 ಓವರ್'ಗಳಲ್ಲಿ 187
(ವಿರಾಟ್ 70, ಎಬಿಡಿ 72)

ಫಲಿತಾಂಶ: ಆರ್'ಸಿಬಿ'ಗೆ 5 ವಿಕೇಟ್ ಜಯ

loader