ಪ್ರಸಕ್ತ 10ನೇ ಆವೃತ್ತಿಯ ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ್ದು 308ರನ್’ಗಳಾದರೆ, ಎಬಿಡಿ ಬಾರಿಸಿದ್ದು ಕೇವಲ 2316ರನ್ ಮಾತ್ರ...

ನವದೆಹಲಿ(ಮೇ.15): 2016ರ ಐಪಿಎಲ್ ಟೂರ್ನಿಯಲ್ಲಿ ಆರ್’ಸಿಬಿ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲು ಕಂಡರೂ ಕೊನೆಯಲ್ಲಿ ಎಚ್ಚೆತ್ತುಕೊಂಡು ಪ್ಲೇ-ಆಫ್ ಹಂತಕ್ಕೇರಿ ಕೊನೆಗೆ ಫೈನಲ್ ಕೂಡಾ ಪ್ರವೇಶಿಸಿತ್ತು. ಆದರೆ ಈ ಬಾರಿ ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.

ಕಳೆದ ಬಾರಿಸಿ ಆರ್’ಸಿಬಿ ಫೈನಲ್ ತಲುಪಲು ಪ್ರಮುಖ ಕಾರಣವಾಗಿದ್ದು ತಂಡದ ಸ್ಟಾರ್ ಬ್ಯಾಟ್ಸ್’ಮನ್’ಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್.

ಹೌದು ಕಳೆದ ವೃತ್ತಿಯಲ್ಲಿ ಈ ಇಬ್ಬರು ಬ್ಯಾಟ್ಸ್’ಮನ್’ಗಳೇ ಒಟ್ಟು 1600ರನ್ ಕಲೆಹಾಕಿದ್ದರು. ಆದರೆ ಈ ಬಾರಿ ಆರ್’ಸಿಬಿ ಇಡೀ ತಂಡ ಒಟ್ಟಾರೆ ಕಲೆಹಾಕಿದ್ದು ಕೇವಲ 1608ರನ್. ಅಂದರೆ ಕಳೆದ ಬಾರಿ ಆ ಇಬ್ಬರು ಬ್ಯಾಟ್ಸ್’ಮನ್’ಗಳು ಕಲೆಹಾಕಿದ್ದಕ್ಕಿಂತ ಕೇವಲ 8 ರನ್ ಮಾತ್ರ ಹೆಚ್ಚಿಗೆ ಈ ಬಾರಿ ದಾಖಲಿಸಿದ್ದಾರೆ.

ಪ್ರಸಕ್ತ 10ನೇ ಆವೃತ್ತಿಯ ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ್ದು 308ರನ್’ಗಳಾದರೆ, ಎಬಿಡಿ ಬಾರಿಸಿದ್ದು ಕೇವಲ 2316ರನ್ ಮಾತ್ರ...