ಕಳೆದ ಆವೃತ್ತಿಯಲ್ಲಿ ನಾಮಕಾವಸ್ತೆಗೆ ಇಬ್ಬರು ಕನ್ನಡಿಗರನ್ನು ಖರೀದಿಸಿದ್ದ ಆರ್‌ಸಿಬಿ, ಒಂದೂ ಪಂದ್ಯದಲ್ಲಿ ಆಡಿಸಿರಲಿಲ್ಲ. ಕೊಹ್ಲಿ ನೇತೃತ್ವದ ತಂಡ ಒಟ್ಟು 10 ಆಟಗಾರರನ್ನು ಕೈಬಿಟ್ಟಿದ್ದು ಆ ಪೈಕಿ ಬ್ರೆಂಡನ್ ಮೆಕ್ಕಲಂ, ಕೋರಿ ಆ್ಯಂಡರ್‌ಸನ್, ಸರ್ಫರಾಜ್ ಖಾನ್, ಕ್ರಿಸ್ ವೋಕ್ಸ್ ಪ್ರಮುಖರಾಗಿದ್ದಾರೆ.
ಬೆಂಗಳೂರು[ನ.16]: 2019ರ ಐಪಿಎಲ್‌ಗೆ ತಂಡಗಳು ಸಿದ್ಧತೆ ಆರಂಭಿಸಿದ್ದು, ಮೊದಲ ಹಂತದಲ್ಲಿ ತಮಗೆ ಅಗತ್ಯವಿಲ್ಲ ಎನಿಸಿದ ಆಟಗಾರರನ್ನು ಹೊರಹಾಕಿವೆ.
ತಂಡಗಳು ತಾವು ಉಳಿಸಿಕೊಳ್ಳುವ ಹಾಗೂ ಹೊರಹಾಕುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಗುರುವಾರ ಅಂತಿಮ ದಿನವಾಗಿತ್ತು. ಅದರಂತೆ ಆರ್‌ಸಿಬಿ ತಂಡ ತಾನು ಉಳಿಸಿಕೊಂಡಿರುವ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತಂಡದಲ್ಲಿದ್ದ ಕರ್ನಾಟಕದ ಪವನ್ ದೇಶಪಾಂಡೆ ಹಾಗೂ ಅನಿರುದ್ಧ ಜೋಶಿಯನ್ನು ಹೊರಹಾಕಿದೆ.