Asianet Suvarna News Asianet Suvarna News

ಆರ್'ಸಿಬಿಯಿಂದ ಗೇಲ್ ಕಿಕೌಟ್..?: ಗೇಲ್'ಗೆ ನಡುಕ ಹುಟ್ಟಿಸಿದ 'ಡಬಲ್' ಸೆಂಚುರಿ ವೀರ!

ಒಂದೇ ಒಂದು ಇನ್ನಿಂಗ್ಸ್​​'ನಲ್ಲಿ ವಿಶ್ವ ಕ್ರಿಕೆಟ್'​ನಲ್ಲಿ ಸದ್ದು ಮಾಡುತ್ತಿದ್ದಾರೆ. ಎವಿನ್ ಲೆವಿಸ್ ಈಗ ಅವರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ. ಆರ್​'ಸಿಬಿಯಂತೂ ಗೇಲ್'​ಗೆ ಕೊಕ್ ಕೊಟ್ಟು ಲೆವಿಸ್​ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇನ್ನು ಲೆವಿಸ್​'ನಿಂದ ವಿಂಡೀಸ್ ನಾಯಕ ಬ್ರಾಥ್​​'ವೈಟ್​'ಗೆ ಲಕ್ಷಾಂತರ ನಷ್ಟವಾಗಿದೆ.

RCB Is Trying To Drop Gayle and take this cricketer to his place

ಒಂದೇ ಒಂದು ಇನ್ನಿಂಗ್ಸ್​​'ನಲ್ಲಿ ವಿಶ್ವ ಕ್ರಿಕೆಟ್'​ನಲ್ಲಿ ಸದ್ದು ಮಾಡುತ್ತಿದ್ದಾರೆ. ಎವಿನ್ ಲೆವಿಸ್ ಈಗ ಅವರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿದ್ದಾರೆ. ಆರ್​'ಸಿಬಿಯಂತೂ ಗೇಲ್'​ಗೆ ಕೊಕ್ ಕೊಟ್ಟು ಲೆವಿಸ್​ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇನ್ನು ಲೆವಿಸ್​'ನಿಂದ ವಿಂಡೀಸ್ ನಾಯಕ ಬ್ರಾಥ್​​'ವೈಟ್​'ಗೆ ಲಕ್ಷಾಂತರ ನಷ್ಟವಾಗಿದೆ.

ಟಿ20 ಕ್ರಿಕೆಟ್ ಅಂದ್ರೆ ತಕ್ಷಣ ನೆನಪಿಗೆ ಬರುವುದು ವೆಸ್ಟ್​ ಇಂಡೀಸ್'​ನ ಸ್ಫೋಟಕ ಬ್ಯಾಟ್ಸ್​ಮನ್​ ಕ್ರಿಸ್ ಗೇಲ್. ಟಿ20 ಕ್ರಿಕೆಟ್ ಈ ಮಟ್ಟಕ್ಕೆ ಸೂಪರ್ ಡೂಪರ್ ಹಿಟ್ ಆಗಿದೆ ಅಂದರೆ ಅದಕ್ಕೆ ಈ ವಿಂಡೀಸ್ ದೈತ್ಯನ ಕೊಡುಗೆ ಅಪಾರ. ಚೊಚ್ಚಲ ಟಿ20 ವರ್ಲ್ಡ್'​ಕಪ್'​ನ ಚೊಚ್ಚಲ ಪಂದ್ಯದಲ್ಲೇ ಸೆಂಚುರಿ ಸಿಡಿಸಿ, ವಿಶ್ವ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ್ದರು.

ಇನ್ನು ಐಪಿಎಲ್'​ನಲ್ಲಂತೂ ಗೇಲ್ ಮಹಾಶಯನದ್ದೇ ಹವಾ. ಆರ್​ಸಿಬಿ ತಂಡ ಸೇರಿಕೊಂಡ ಮೇಲಂತೂ ಗೇಲ್​ ಆಟಕ್ಕೆ ಫಿದಾ ಆದವರೇ ಇಲ್ಲ. ಇರುವ ಬರುವ ರೆಕಾರ್ಡ್'​ಗಳನ್ನೆಲ್ಲಾ ಮಾಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಗೇಲ್​ ಹವಾ ಕಮ್ಮಿಯಾಗಿದೆ. ಈಗ ಏನಿದ್ದರೂ ವಿಂಡೀಸ್​ನವರೇ ಆದ ಎವಿನ್ ಲೆವಿಸ್ ಹವಾ.

ಭಾರತ ವಿರುದ್ಧ ಎವಿನ್ ಲೆವಿಸ್ ‘ಡಬಲ್’ ಸೆಂಚುರಿ..!

ಎವಿನ್ ಲೆವಿಸ್​ ಟೀಂ ಇಂಡಿಯಾ ವಿರುದ್ಧ ಶತಕ ಬಾರಿಸಿದ್ದೇ ಬಂತು. ಅವರ ಕ್ರಿಕೆಟ್​ ದುನಿಯಾನೇ ಚೇಂಜ್ ಆಗುವ ಹಾಗೆ ಕಾಣುತ್ತಿದೆ. 2016ರಲ್ಲಿ ಟೀಂ ಇಂಡಿಯಾ ವಿರುದ್ಧವೇ ಸೆಂಚುರಿ ಸಿಡಿಸಿದ್ದರು. ಆದ್ರೂ ಲೆವಿಸ್ ಕಾಣಿಯಾಗಿದ್ದರು. ಆದ್ರೆ ಮೊನ್ನೆ ಭಾರತ ವಿರುದ್ಧವೇ ಸೆಕೆಂಡ್ ಸೆಂಚುರಿ ಬಾರಿಸುವ ಮೂಲಕ ವಿಶ್ವ ಕ್ರಿಕೆಟ್​'ನಲ್ಲಿ ಧೂಳೆಬ್ಬಿಸಿದ್ದಾರೆ. 62 ಬಾಲ್​ನಲ್ಲಿ ಅಜೇಯ 125 ರನ್ ಚಚ್ಚಿ ಬಿಸಾಕಿದ್ರು. 6 ಬೌಂಡ್ರಿ, ಬರೋಬ್ಬರಿ 12 ಭರ್ಜರಿ ಸಿಕ್ಸ್​ ಸಿಡಿಸಿದ್ದರು. ಲೆವಿಸ್ ಅಬ್ಬರಕ್ಕೆ ಭಾರತೀಯರು ಧೂಳಿಪಟವಾಗಿದ್ದರು.

ಎವಿನ್ ಲೆವಿಸ್​ ಬ್ಯಾಟಿಂಗ್ ವೈಭವ ನೋಡಿದ ಐಪಿಎಲ್ ಫ್ರಾಂಚೈಸಿಗಳು ಈಗ ಅವರ ಹಿಂದೆ ಬಿದ್ದಿದ್ದಾರೆ. ಆತನ ಟಿ20 ಟ್ರ್ಯಾಕ್ ರೆಕಾರ್ಡ್​ ತೆಗೆಯುತ್ತಿದ್ದಾರೆ. ಆತನ ಜಾತಕ ಜಾಲಾಡುತ್ತಿದ್ದಾರೆ. ಏನೇ ಆದ್ರೂ ಈ ಸಲದ ಬಿಡ್​ನಲ್ಲಿ ಆತನನ್ನ ಖರೀದಿಸಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದಾರೆ. ಈಗಲೆ ಈ ಬಗ್ಗೆ ಪ್ಲಾನ್ ಸಹ ಮಾಡುತ್ತಿದ್ದಾರೆ.

ಕಳೆದ ಐಪಿಎಲ್ ಸೀಸನ್'​ನಲ್ಲೇ ಕ್ರಿಸ್ ಗೇಲ್ ಮಂಕಾಗಿದ್ದರು. ಈ ಸಲವೂ ಆವರಾಟ ನಡೆಯಲಿಲ್ಲ. ಹೀಗಾಗಿ ಅವರನ್ನ ಡ್ರಾಪ್ ಮಾಡಲು ಆರ್​ಸಿಬಿ ಪ್ಲಾನ್ ಮಾಡಿತ್ತು. ಈಗ ಆರ್​ಸಿಬಿಯೂ ಎವಿನ್ ಲೆವಿಸ್​ ಮೇಲೆಯೇ ಕಣ್ಣಿಟ್ಟಿದೆ. ವಿಂಡೀಸ್ ಆಟಗಾರರನ್ನ ಡ್ರಾಪ್ ಮಾಡಿ ವಿಂಡೀಸ್ ಆಟಗಾರರನ್ನೇ ಖರೀದಿಸಲು ಚಿಂತಿಸುತ್ತಿದೆ. ಲೆವಿಸ್​ ಬ್ಯಾಟಿಂಗ್ ವೈಭವವನ್ನೂ ಕಣ್ಣಾರೆ ನೋಡಿರುವ ನಾಯಕ ವಿರಾಟ್ ಕೊಹ್ಲಿ ಫಿದಾ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಮುಂದಿನ ಐಪಿಎಲ್​ನಲ್ಲಿ ಲೆವಿಸ್ ಆರ್​ಸಿಬಿ ಪರ ಬ್ಯಾಟ್ ಬೀಸಲಿದ್ದಾರೆ.

ಎವಿಲ್​ ಲೆವಿಸ್​ ಟಿ20 ರೆಕಾರ್ಡ್​ ಹೀಗಿದೆ. ಒಟ್ಟು 60 ಪಂದ್ಯಗಳನ್ನಾಡಿರುವ ಲೆವಿಸ್, 32.26 ಸರಾಸರಿಯಲ್ಲಿ 1839 ರನ್ ಹೊಡೆದಿದ್ದಾರೆ. 137.13ರ ಸ್ಟ್ರೈಕ್'​ರೇಟ್​'ನಲ್ಲಿ ಬ್ಯಾಟಿಂಗ್ ಮಾಡಿ, 3 ಶತಕ, 12 ಅರ್ಧಶತಕ ಬಾರಿಸಿದ್ದಾರೆ.

ಲೆವಿಸ್'​ಗೆ 50 ಐಸಿಸಿಗೆ 20 ಬ್ರಾಥ್'​ವೈಟ್'​ಗೆ ಉಳಿದದ್ದು 30

ಎವಿನ್ ಲೆವಿಸ್​ ಬ್ಯಾಟಿಂಗ್​ನಿಂದ ವಿಂಡೀಸ್​ ಏಕೈಕ ಟಿ20 ಪಂದ್ಯ ಗೆದ್ದು ಸಂಭ್ರಮಿಸಿತು. ಒಂಡೇ ಸಿರೀಸ್​ನಲ್ಲಿ ಹೋದ ಮಾನವನ್ನ ಪಡೆದುಕೊಳ್ತು. ಆದ್ರೆ ನಾಯಕ ಕಾರ್ಲ್​ ಬ್ರಾಥ್​​ವೈಟ್​ ಮಾತ್ರ ಗೆದ್ದರೂ ಸಂಭ್ರಮಿಸಲಾಗಲಿಲ್ಲ. ಅದಕ್ಕೆ ಕಾರಣ ಎವಿನ್ ಲೆವಿಸ್. ಟೀಂ ಇಂಡಿಯಾ ವಿರುದ್ಧ ಯಾರಾದ್ರೂ ಸೆಂಚುರಿ ಅಥವಾ ಹಾಫ್​ ಸೆಂಚುರಿ ಹೊಡೆದರೆ ತಮ್ಮ ಸಂಭಾವನೆಯಲ್ಲಿ ಶೇಕಡ 50ರಷ್ಟು ನೀಡ್ತೇನೆ ಅಂತ ಬ್ರಾಥ್​ವೈಟ್ ಘೋಷಿಸಿದ್ದರು. ಸಿಕ್ಕಿದ್ದೆ ಚಾನ್ಸ್ ಅಂತ ಲೆವಿಸ್​ ಭಾರತೀಯರನ್ನ ಹಿಗ್ಗಾ ಮುಗ್ಗ ದಂಡಿಸಿ ಸೆಂಚುರಿ ಹೊಡೆದರು.

ಈಗ ಬ್ರಾಥ್​ವೈಟ್ ಸಂಭಾವನೆಯಲ್ಲಿ ಶೇಕಡ 50ಕ್ಕೆ ಲೆವಿಸ್ ಕತ್ತರಿ ಹಾಕಿದ್ರು. ಇದು ಸಾಲದೆಂಬಂತೆ ನಿಧಾನಗತಿ ಬೌಲಿಂಗ್ ಹಿನ್ನಲೆಯಲ್ಲಿ ವಿಂಡೀಸ್ ನಾಯಕನಿಗೆ ಶೇಕಡ 20ರಷ್ಟು ದಂಡ ವಿಧಿಸಿದೆ ಐಸಿಸಿ. ಅಲ್ಲಿಗೆ ಸಂಭಾವನೆಯಲ್ಲಿ ಬ್ರಾಥ್​​ವೈಟ್​ಗೆ ಸಿಕ್ಕಿದ್ದು ಶೇಕಡ 30ರಷ್ಟು ಮಾತ್ರ. ಈಗ ಬ್ರಾಥ್​ವೈಟ್ ಕೈಕೈ ಹಿಸಿಕೊಳ್ತಿದ್ದಾರೆ. ಒಟ್ನಲ್ಲಿ ಲೆವಿಸ್ ಸ್ಫೋಟಕ ಬ್ಯಾಟಿಂಗ್ ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.

Follow Us:
Download App:
  • android
  • ios