ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ರಾತ್ರಿ ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಎದುರಿಸಲಿದೆ.

ರಾಜ್‌'ಕೋಟ್(ಏ.19): ಬೆನ್ನು ನೋವಿನ ಸಮಸ್ಯೆಯಿಂದಾಗಿ ಮಂಗಳವಾರ ರಾಜ್‌ಕೋಟ್‌ನಲ್ಲಿ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌, ಮುಂದಿನ ಪಂದ್ಯದ ವೇಳೆಗೆ ಗುಣಮುಖರಾಗುವ ಭರವಸೆ ಇದೆ ಎಂದು ಆರ್‌'ಸಿಬಿ ತಂಡದ ಪ್ರಧಾನ ಕೋಚ್ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಅವರು ‘‘ಕೆಕೆಆರ್ ವಿರುದ್ಧದ ಪಂದ್ಯದ ವೇಳೆಗೆ ಡಿವಿಲಿಯರ್ಸ್‌ ಗುಣಮುಖರಾಗುವ ನಿರೀಕ್ಷೆ ಇದೆ. ಸ್ಯಾಮಯಲ್ ಬದ್ರಿ ಹಾಗೂ ಟೈಮಲ್ ಮಿಲ್ಸ್ ಸಹ ಹನ್ನೊಂದರ ಬಳಗಕ್ಕೆ ಹಿಂದಿರುಗುವ ಸಾಧ್ಯತೆ ಇದೆ’’ ಎಂದು ಹೇಳಿದ್ದಾರೆ.

ಕ್ರಿಸ್ ಗೇಲ್ ಲಯಕ್ಕೆ ಮರಳಿದ್ದು ಕೋಚ್ ವೆಟ್ಟೋರಿಯ ಸಂತಸಕ್ಕೆ ಕಾರಣವಾಗಿದೆ. ‘‘ಈ ರೀತಿಯ ಪಿಚ್‌ಗಳಲ್ಲಿ ಕ್ರಿಸ್ ಒಬ್ಬ ಅಸಾಧಾರಣ ಬ್ಯಾಟ್ಸ್‌ಮನ್. ಅವರು ಲಯ ಕಂಡುಕೊಂಡಿರುವುದು ಇಡೀ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ’’ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ರಾತ್ರಿ ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಎದುರಿಸಲಿದೆ.