ಕಳೆದ ವರ್ಷವಷ್ಟೇ ಆರ್’ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಗ್ಯಾರಿ 2019ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಬೆಂಗಳೂರು[ಆ.30]: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ನೇಮಕವಾಗಿದ್ದಾರೆ. ಡೇನಿಯಲ್ ವಿಟೋರಿ ಅವರ ಒಪ್ಪಂದವನ್ನು ಆರ್’ಸಿಬಿ ಮುಂದುವರೆಸದೇ ಅವರಿಗೆ ಕೋಕ್ ನೀಡಲಾಗಿತ್ತು. ಇದೀಗ ಆರ್’ಸಿಬಿ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಆಯ್ಕೆಯಾಗಿದ್ದಾರೆ.

Scroll to load tweet…

ಕಳೆದ ವರ್ಷವಷ್ಟೇ ಆರ್’ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಗ್ಯಾರಿ 2019ರ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2008ರಿಂದ ಐಪಿಎಲ್’ನಲ್ಲಿ ಪಾಲ್ಗೊಳ್ಳುತ್ತಿರುವ ಆರ್’ಸಿಬಿ ಇದುವರೆಗೂ ಒಮ್ಮೆಯೂ ಪ್ರಶಸ್ತಿ ಎತ್ತಿಹಿಡಿಯಲು ಯಶಸ್ವಿಯಾಗಿಲ್ಲ. ಹಾಗಾಗೀ ಟೀಂ ಇಂಡಿಯಾವು 2011ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಲು ಮಾರ್ಗದರ್ಶನ ನೀಡಿದ್ದ ಗ್ಯಾರಿ ಅವರನ್ನೇ ಆರ್’ಸಿಬಿ ಕೋಚ್ ಆಗಲು ಪ್ರಾಂಚೈಸಿ ನಿರ್ಧರಿಸಿದೆ.

ಇದನ್ನು ಓದಿ:ಆರ್‌ಸಿಬಿ ತಂಡಕ್ಕೆ ಮೇಜರ್ ಸರ್ಜರಿ-ಹಲವರಿಗೆ ಕೊಕ್ !

ಗ್ಯಾರಿ ಕರ್ಸ್ಟನ್ 2008ರಿಂದ 2011ರವರೆಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಗ್ಯಾರಿ ಮಾರ್ಗದರ್ಶನದಲ್ಲಿ 2011ರ ಏಕದಿನ ವಿಶ್ವಕಪ್’ನಲ್ಲಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪ್ರಸ್ತುತ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀರಸ ಪ್ರದರ್ಶನ ತೋರುತ್ತಿದ್ದು, 2017ರ ಆವೃತ್ತಿಯಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು ನಿರಾಸೆ ಅನುಭವಿಸಿತ್ತು. ಇನ್ನು ಕಳೆದ 2018ರ ಆವೃತ್ತಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.