ಈವರೆಗೂ ಆಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಸೋತಿರುವ ವಿರಾಟ್‌ ಪಡೆ, ಕೇವಲ 2ರಲ್ಲಿ ಮಾತ್ರ ಜಯಿಸಿದೆ.

ಬೆಂಗಳೂರು(ಮೇ.08): ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಇದೇ ಮೊದಲ ಬಾರಿಗೆ ಈ ಮಟ್ಟದ ಕಳಪೆ ಪ್ರದರ್ಶನ ತೋರಿರುವುದು. ಮೂರು ಬಾರಿ ಫೈನಲ್‌ ಪ್ರವೇಶಿಸಿರುವ ತಂಡ ಈ ಬಾರಿ ಅಂಕಪಟ್ಟಿ​ಯಲ್ಲಿ ಕೊನೆ ಸ್ಥಾನವನ್ನು ಗಟ್ಟಿಪಡಿಸಿಕೊಂಡಿದೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ತಂಡ ಒಂದು ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದು. ಈವರೆಗೂ ಆಡಿರುವ 13 ಪಂದ್ಯಗಳಲ್ಲಿ 10ರಲ್ಲಿ ಸೋತಿರುವ ವಿರಾಟ್‌ ಪಡೆ, ಕೇವಲ 2ರಲ್ಲಿ ಮಾತ್ರ ಜಯಿಸಿದೆ. ಉಳಿದೊಂದು ಪಂದ್ಯದಲ್ಲಿ ಗೆದ್ದರೂ ತಂಡದ ಕನಿಷ್ಠ ಗೆಲುವುಗಳ ಸಾಧನೆ ಇದಾಗಿರಲಿದೆ. 2008ರಲ್ಲಿ ಆರ್‌ಸಿಬಿ 4 ಪಂದ್ಯಗಳಲ್ಲಿ ಗೆದ್ದಿತ್ತು. 2009ರಲ್ಲಿ 8, 2010ರಲ್ಲಿ 7 ಗೆಲುವು, 2011ರಲ್ಲಿ 9 ಗೆಲುವು, 2012ರಲ್ಲಿ 8, 2013ರಲ್ಲಿ 9 ಜಯ, 2014ರಲ್ಲಿ 5, 2015ರಲ್ಲಿ 7, 2016ರಲ್ಲಿ 8 ಪಂದ್ಯಗಳನ್ನು ತಂಡ ಗೆದ್ದಿತ್ತು. 
ಆರ್‌ಸಿಬಿಗೆ 10 ಸೋಲು!