ಇಂದೋರ್​ನಲ್ಲಿ ಹಾರ್ದಿಕ್ ಪಾಂಡ್ಯ ಆರ್ಭಟ ನೋಡಿ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ಭಾರತಕ್ಕೆ ಒಬ್ಬ ಅದ್ಭುತ ಆಲ್​ರೌಂಡರ್ ಸಿಕ್ಕಿದ ಅಂತ ಖುಷಿ ಪಡ್ತಿದ್ದಾರೆ. ಆದ್ರೆ ಇದೇ ಖುಷಿ ಹೆಚ್ಚು ದಿನ ಇರ್ಬೇಕು ಅಂದ್ರೆ ಪಾಂಡ್ಯ ಮೇಲೆ ಪ್ರಯೋಗ ಮಾಡೋದನ್ನ ನಿಲ್ಲಿಸಬೇಕು. ಇಲ್ಲವಾದ್ರೆ ಇರ್ಫಾನ್ ಪಠಾಣ್​ಗೆ ಆದ ಗತಿಯೇ ಪಾಂಡ್ಯಗೂ ಆಗುತ್ತೆ.

ಸೂಪರ್ ಸಂಡೇಯಂದು ಇಂದೋರ್​'ನಲ್ಲಿ ಹಾರ್ದಿಕ್ ಪಾಂಡ್ಯನದ್ದೇ ಹವಾ. ಬೌಲಿಂಗ್​​'ನಲ್ಲಿ ಒಂದು ವಿಕೆಟ್ ಪಡೆದು ನಿರಾಸೆ ಅನುಭವಿಸಿದ್ರೂ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡಿ ಬಿಟ್ರು. ಸಿಕ್ಕಸಿಕ್ಕ ಕಾಂಗರೂ ಬೌಲರ್​ಗಳನ್ನ ಚೆಂಡಾಡಿದ ಪಾಂಡ್ಯ, 72 ಬಾಲ್​ನಲ್ಲಿ 4 ಬೌಂಡ್ರಿ, 5 ಸಿಕ್ಸ್ ಸಹಿತ 78 ರನ್ ಕೊಳ್ಳೆ ಹೊಡೆದ್ರು. ಪಂದ್ಯ ನೋಡಿದೋರೆಲ್ಲಾ ಹಾರ್ದಿಕ್ ಬ್ಯಾಟಿಂಗ್ ವೈಭವಕ್ಕೆ ಫಿದಾ ಆಗಿ ಹೋಗಿದ್ದಾರೆ. ಮ್ಯಾಚ್ ವಿನ್ನರ್​ ಅವರೇ.

ಬಿಟ್ಟಿ ಟಿಪ್ಸ್ ಕೊಡ್ತಿದ್ದಾರೆ ಕ್ರಿಕೆಟ್ ಪಂಡಿತರು-ಫ್ಯಾನ್ಸ್

ಇಂದೋರ್​ನಲ್ಲಿ ಹಾರ್ದಿಕ್ ಕಾಂಗರೂಗಳನ್ನ ಮನಬಂದಂತೆ ದಂಡಿಸಿದ್ದನ್ನ ನೋಡಿದ್ಮೇಲೆ ಎಲ್ಲರೂ ಕೋಚ್ ರವಿಶಾಸ್ತ್ರಿಯನ್ನ ಹೊಗಳುತ್ತಿದ್ದಾರೆ. ಯಾಕೆ ಗೊತ್ತಾ..? 4ನೇ ಕ್ರಮಾಂಕಕ್ಕೆ ಆಡಲು ಪಾಂಡ್ಯಗೆ ಬಡ್ತಿ ನೀಡಿದ್ದೇ ರವಿಶಾಸ್ತ್ರಿಯಂತೆ. ಇದನ್ನ ಕ್ಯಾಪ್ಟನ್ ಕೊಹ್ಲಿ ಸಹ ಕನ್ಫರ್ಮ್​ ಮಾಡಿದ್ದಾರೆ. ಈಗ 4ನೇ ಕ್ರಮಾಂಕಕ್ಕೆ ಪ್ರಯೋಗದ ಮೇಲೆ ಪ್ರಯೋಗ ಮಾಡ್ತಿದ್ದೀರಾ. ಯಾರು ಸೂಟ್ ಆಗ್ತಿಲ್ಲ. ಪಾಂಡ್ಯನನ್ನೇ ಆ ಪ್ಲೇಸ್​ಗೆ ಫಿಕ್ಸ್ ಮಾಡಿ ಅಂತ ಕ್ರಿಕೆಟ್ ಪಂಡಿತರು ಮತ್ತು ಫ್ಯಾನ್ಸ್ ಪುಗಸಟ್ಟೆ ಟಿಪ್ಸ್ ಕೊಡ್ತಿದ್ದಾರೆ.

ಪ್ರಯೋಗ ಮಾಡಿದ್ರೆ ಪಾಂಡ್ಯ ಆರ್ಭಟ ಕೆಲವೇ ದಿನ ಮಾತ್ರ..!
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಿದ್ರೆ ಅವರು ಆರ್ಭಟ ನೋಡಲು ಸಿಗೋದು ಇನ್ನು ಕೆಲವೇ ದಿನಗಳು ಮಾತ್ರ. ಯಾಕಂದ್ರೆ ಅವರೇ ಟೀಂ ಇಂಡಿಯಾದಿಂದ ಮಾಯವಾಗಿ ಬಿಡ್ತಾರೆ. ಯಾಕೆ ಗೊತ್ತಾ..? ದಶಕಗಳ ಹಿಂದೆ ಹೀಗೆ ಒಬ್ಬ ಆಲ್​ರೌಂಡರ್​ಗೆ ಪ್ರಯೋಗ ಮಾಡಿ ಆತನ ಕೆರಿಯರೇ ಕ್ಲೋಸ್ ಆಗಿ ಹೋಯ್ತು. ಈಗ ಪಾಂಡ್ಯನೂ ಆತನ ಹಾದಿ ಹಿಡಿದ್ರೂ ಆಶ್ಚರ್ಯವಿಲ್ಲ.

ಇರ್ಫಾನ್ ಕೆರಿಯರ್ ಕ್ಲೋಸ್ ಮಾಡಿದ್ದು ಬ್ಯಾಟಿಂಗ್ ಬಡ್ತಿ: ಚಾಪೆಲ್ ಮಾಡಿದ ತಪ್ಪನ್ನ ಶಾಸ್ತ್ರಿ ಮಾಡ್ತಿದ್ದಾರೆ..!

ಇರ್ಫಾನ್ ಪಠಾಣ್​​ ಮಧ್ಯಮ ವೇಗಿ ಕಮ್​ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್​ಮನ್.​ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಾರೆ ಅನ್ನೋ ಕಾರಣಕ್ಕೆ ಅವರಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಲಾಯ್ತು. ಆನಂತರ ಅವರು ಉತ್ತಮ ಬೌಲರೂ​ ಆಗದೆ, ಉತ್ತಮ ಬ್ಯಾಟ್ಸ್​ಮನೂ ಆಗದೆ ತಂಡದಿಂದಲೇ ಕಿಕೌಟ್ ಆದ್ರು. ಪಠಾಣ್​ಗೆ ಬ್ಯಾಟಿಂಗ್ ಬಗ್ಗೆ ತಲೆಕೆಡಿಸಿ ಅವರ ಕೆರಿಯರ್ ಅನ್ನೇ ಕ್ಲೋಸ್ ಮಾಡಿದ್ರು ಗ್ರೆಗ್ ಚಾಪೆಲ್. ಈಗ ಚಾಪೆಲ್ ಮಾಡಿದ ತಪ್ಪನ್ನೇ ರವಿಶಾಸ್ತ್ರಿಯೂ ಮಾಡ್ತಿದ್ದಾರೆ. ಉತ್ತಮ ಆಲ್​ರೌಂಡರ್ ಆಗಿರುವ ಪಾಂಡ್ಯಗೆ ಬ್ಯಾಟಿಂಗ್​ನಲ್ಲಿ ಬಡ್ತಿ ಕೊಡ್ತಿದ್ದಾರೆ. ಪಾಂಡ್ಯ ಬ್ಯಾಟ್ಸ್​ಮನ್ ಆಗೋ ಆತುರದಲ್ಲಿ ಎರಡು ವಿಭಾಗದಲ್ಲಿ ವಿಫಲವಾದ್ರೂ ಆಶ್ಚರ್ಯವಿಲ್ಲ.

ಪಾಂಡ್ಯ 7ನೇ ಕ್ರಮಾಂಕದಲ್ಲಿ ಆಡೋದೇ ಸೂಕ್ತ: ಪ್ರಯೋಗಕ್ಕೆ ಹಾರ್ದಿಕ್ ಬಲಿ ಕೊಡಬೇಡಿ ಶಾಸ್ತ್ರಿ

ಪಾಂಡ್ಯ 7ನೇ ಕ್ರಮಾಂಕದಲ್ಲಿ ಆಡೋದೇ ಬೆಟರ್. ಅಲ್ಲಿ ಅವರೊಬ್ಬ ಅದ್ಭುತ ಬ್ಯಾಟ್ಸ್​ಮನ್. ಮ್ಯಾಚ್ ಫಿನಿಶ್. ಡೆತ್ ಓವರ್​ನಲ್ಲಿ ರನ್ ಕೊಳ್ಳೆ ಹೊಡೆಯೋ ಮೂಲಕ ತಂಡಕ್ಕೆ ನೆರವಾಗ್ತಾರೆ. ಅದೇ ಕ್ರಮಾಂಕದಲ್ಲಿ ಅವರು ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ಯಾವಾವ ಕ್ರಮಾಂಕದಲ್ಲಿ ಎಷ್ಟೆಷ್ಟು ರನ್ ಹೊಡೆದಿದ್ದಾರೆ ನೋಡಿ. 4ನೇ ಕ್ರಮಾಂಕದಲ್ಲಿ 3 ಪಂದ್ಯದಿಂದ 33.66ರ ಸರಾಸರಿಯಲ್ಲಿ 101 ರನ್ ಹೊಡೆದಿದ್ದಾರೆ. ಒಂದು ಅರ್ಧಶತಕ ದಾಖಲಿಸಿದ್ದಾರೆ. 5ನೇ ಕ್ರಮಾಂಕದಲ್ಲಿ ಒಂದು ಪಂದ್ಯದಲ್ಲಿ ಅಜೇಯ 20 ರನ್ ಬಾರಿಸಿದ್ದಾರೆ. 6ನೇ ಕ್ರಮಾಂಕದಲ್ಲಿ ಏಕೈಕ ಮ್ಯಾಚ್​ನಿಂದ 9 ರನ್ ಗಳಿಸಿದ್ದಾರೆ. ಇನ್ನಯ ಅವರ ನೆಚ್ಚಿನ 7ನೇ ಕ್ರಮಾಂಕದಲ್ಲಿ 8 ಪಂದ್ಯಗಳಲ್ಲಿ 52.33ರ ಸರಾಸರಿಯಲ್ಲಿ 314 ರನ್​ ಕಲೆಹಾಕಿದ್ದಾರೆ. 3 ಅರ್ಧಶತಕಗಳು ಇವೆ. ಇನ್ನು 8ನೇ ಕ್ರಮಾಂಕದಲ್ಲಿ 2 ಮ್ಯಾಚ್​ನಲ್ಲಿ 45 ರನ್ ಮಾತ್ರ ಹೊಡೆದಿದ್ದಾರೆ.

ಇಂದೋರ್​ನಲ್ಲಿ ಸ್ಪಿನ್ನರ್​ಗಳನ್ನ ದಂಡಿಸಲಿ ಅನ್ನೋ ಕಾರಣಕ್ಕೆ ಪಾಂಡ್ಯಗೆ ಬ್ಯಾಟಿಂಗ್ ಬಡ್ತಿ ನೀಡಲಾಯ್ತು. ಅಲ್ಲಿ ಅವರು ಸಕ್ಸಸ್ ಸಹ ಆದ್ರು. ಆದ್ರೆ 7ನೇ ಕ್ರಮಾಂಕದಲ್ಲಿ ಆಡೋ ಹಾರ್ದಿಕ್ ಮೇಲೆ ನಿಮ್ಮ ಪ್ರಯೋಗ ಹಾಕ್ಬೇಡಿ. ಆತ ಅದೇ ಕ್ರಮಾಂಕದಲ್ಲಿ ಆಡಿದ್ರೆ ಸೂಕ್ತ. ಇಲ್ಲವಾದ್ರೆ ಪಠಾಣ್​ನಂತೆ ಪಾಂಡ್ಯನೂ ಕೆಲವೇ ದಿನಗಳಲ್ಲಿ ಟೀಮ್​ನಿಂದ ಮಾಯವಾಗಿಬಿಡ್ತಾರೆ. ಹುಷಾರ್​..