ಒಟ್ಟು ಪಾಯಿಂಟ್'ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ 897 ಅಂಕಗಳಿಂದ ಮೊದಲ ಹಾಗೂ ಅಶ್ವಿನ್ 849 ಅಂಕ ಪಡೆದು 2ನೇ ರ‌್ಯಾಂಕ್ ಪಡೆದಿದ್ದಾರೆ.

ಮುಂಬೈ(ಆ.01): ಶ್ರೀಲಂಕಾ ವಿರುದ್ಧದ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಗೆಲುವಿಗೆ ಕಾರಣರಾದ ಸ್ಪಿನ್ನರ್'ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಅವರು ಐಸಿಸಿ ಟೆಸ್ಟ್ ರ‌್ಯಾಂಕಿಂಗ್'ನಲ್ಲಿನಂ.1 ಹಾಗೂ ಹಾಗೂ ನಂ.2 ಸ್ಥಾನಕ್ಕೇರಿದ್ದಾರೆ.

ಒಟ್ಟು ಪಾಯಿಂಟ್'ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ 897 ಅಂಕಗಳಿಂದ ಮೊದಲ ಹಾಗೂ ಅಶ್ವಿನ್ 849 ಅಂಕ ಪಡೆದು 2ನೇ ರ‌್ಯಾಂಕ್ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಬೌಲರ್ ರಂಗನಾ ಹೆರಾತ್ ಇದ್ದಾರೆ.2ನೇ ಟೆಸ್ಟ್ ಕೊಲೊಂಬೊದಲ್ಲಿ ಆಗಸ್ಟ್ 3ರಿಂದ ಆರಂಭವಾಗಲಿದೆ.

ಮೊದಲ ಟೆಸ್ಟ್'ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 304 ರನ್'ಗಳಿಂದ ಬಗ್ಗುಬಡಿದಿತ್ತು. ಟೆಸ್ಟ್'ನ ಮೊದಲ ಇನ್ನಿಂಗ್ಸ್'ನಲ್ಲಿ ಭಾರತ ತಂಡದ ಪರ ಶಿಖರ್ ಧವನ್ 190 ಹಾಗೇ 2ನೇ ಇನ್ನಿಂಗ್ಸ್'ನಲ್ಲಿ ಕೊಹ್ಲಿ ಅಮೋಘ ಶತಕ ಗಳಿಸಿ ಗೆಲುವಿನ ರುವಾರಿಯಾಗಿದ್ದರು.