ಮೂರನೇ ದಿನಕ್ಕೆ ಇನ್ನೂ ಬ್ಯಾಟಿಂಗ್ ಕಾಯ್ದುಕೊಂಡಿರುವ ಜಡ್ಡು, ಸಿಕ್ಸರ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಧರ್ಮಶಾಲಾ(ಮಾ.26): ಕ್ರೀಸ್‌'ಗಿಳಿಯುತ್ತಿದ್ದಂತೆ 2 ಭರ್ಜರಿ ಸಿಕ್ಸರ್ ಸಿಡಿಸಿದ ರವೀಂದ್ರ ಜಡೇಜಾ ಟೆಸ್ಟ್ ಋತುವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಅನ್ನುವ ದಾಖಲೆ ಬರೆದಿದ್ದಾರೆ.

2016-17ರ ಋತುವಿನಲ್ಲಿ ಜಡೇಜಾ ಇದುವರೆಗೂ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೂರನೇ ದಿನಕ್ಕೆ ಇನ್ನೂ ಬ್ಯಾಟಿಂಗ್ ಕಾಯ್ದುಕೊಂಡಿರುವ ಜಡ್ಡು, ಸಿಕ್ಸರ್ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

2010-11ರಲ್ಲಿ ಹರ್ಭಜನ್ ಸಿಂಗ್ 17 ಸಿಕ್ಸರ್‌'ಗಳನ್ನು ಬಾರಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್'ನ ಒಂದು ಋತುವಿನಲ್ಲಿ ಗರಿಷ್ಟ ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದರು. ಆದರೆ ಆ ದಾಖಲೆಯೀಗ ಸೌರಾಷ್ಟ್ರ ಆಟಗಾರನ ಪಾಲಾಗಿದೆ.

ಅದಕ್ಕೂ ಮೊದಲು 2003-04ರಲ್ಲಿ ಈ ದಾಖಲೆ 16 ಸಿಕ್ಸರ್ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಹೆಸರಲ್ಲಿ ದಾಖಲೆ ಇತ್ತು.