ಕಿಂಗ್ಸ್ XI ಪಂಜಾಬ್ ತಂಡಕ್ಕೆ ಅಶ್ವಿನ್ ಕ್ಯಾಪ್ಟನ್

Ravichandran Ashwin to lead Kings XI Punjab in IPL
Highlights

ಕಳೆದ 8 ವರ್ಷಗಳ ಕಾಲ ಚೆನ್ನೈ ಸೂಪರ್'ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್, ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಅಶ್ವಿನ್ ಪುಣೆ ಸೂಪರ್'ಜೈಂಟ್ಸ್ ಪರವಾಗಿಯೂ ಕಣಕ್ಕಿಳಿದಿದ್ದರು.

ನವದೆಹಲಿ(ಫೆ.27): ಐಪಿಎಲ್ 11ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುನ್ನಡೆಸಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಯುವರಾಜ್ ಸಿಂಗ್, ಕ್ರಿಸ್ ಗೇಲ್ ಹಾಗೂ ಅಶ್ವಿನ್ ಈ ಮೂವರ ಪೈಕಿ ಒಬ್ಬರು ನಾಯಕರಾಗಬಹುದು ಎಂದು ಊಹಿಸಲಾಗಿತ್ತು.

ನಾಯಕತ್ವ ವಹಿಸಿಕೊಂಡಿರುವ ಅಶ್ವಿನ್, ‘ಪ್ರತಿಭಾನ್ವಿತ ಆಟಗಾರರಿಂದ ಕೂಡಿರುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಿರುವುದಕ್ಕೆ ತಂಡದ ಆಡಳಿತಕ್ಕೆ, ಮಾಲೀಕರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಇದು ನನಗೆ ಹೆಮ್ಮೆಯ ವಿಚಾರ’ ಎಂದಿದ್ದಾರೆ. ‘ನನ್ನ ಮೇಲೆ ಯಾವುದೇ ಒತ್ತಡವಿಲ್ಲ. 21ನೇ ವಯಸ್ಸಿನಲ್ಲೇ ರಾಜ್ಯ ತಂಡವನ್ನು ಮುನ್ನಡೆಸಿದ್ದೇನೆ. ನಾಯಕತ್ವ ನನಗೆ ಹೊಸದಲ್ಲ’ ಎಂದು ಅಶ್ವಿನ್ ಹೇಳಿದ್ದಾರೆ.

ಕಳೆದ 8 ವರ್ಷಗಳ ಕಾಲ ಚೆನ್ನೈ ಸೂಪರ್'ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನ್, ಎರಡು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಅಶ್ವಿನ್ ಪುಣೆ ಸೂಪರ್'ಜೈಂಟ್ಸ್ ಪರವಾಗಿಯೂ ಕಣಕ್ಕಿಳಿದಿದ್ದರು.

loader