ಅಶ್ವಿನ್ ಜಲ್ಲಿಕಟ್ಟುವಿಗೆ ಬೆಂಬಲ ವ್ಯಕ್ತಪಡಿಸಿದ್ದು, ಶಾಂತಿಯುತವಾಗಿ ಪ್ರತಿಭಟಿಸಲು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಚೆನ್ನೈ(ಜ.24): ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಚೆನ್ನೈ ವಿಮಾನ ನಿಲ್ದಾಣದಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಮನೆಯನ್ನು ಸೇರಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗಲಾಟೆ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಮೊದಲು ಸಂಪೂರ್ಣ ರಕ್ಷಣಾ ಸಿಬ್ಬಂದಿ ಮೂಲಕ ಅಶ್ವಿನ್ ಅವರನ್ನು ಮನೆಗೆ ಕರೆದೊಯ್ಯುವ ವ್ಯವಸ್ಥೆಗೆ ಚಿಂತಿಸಲಾಯಿತು. ನಂತರ ಅಶ್ವಿನ್ ಅವರು ನಡೆದುಕೊಂಡು ಹೋಗುವ ತೀರ್ಮಾನಕ್ಕೆ ಬಂದರು. ಆದರೆ ರಕ್ಷಣೆಯ ದೃಷ್ಠಿಯಿಂದ ಮೆಟ್ರೋ ರೈಲಿನಲ್ಲಿ ಅಶ್ವಿನ್ ಹೋಗಬೇಕಾದ ಪರಿಸ್ಥಿತಿ ಬಂದಿತು.

Scroll to load tweet…

ಅಶ್ವಿನ್ ಜಲ್ಲಿಕಟ್ಟುವಿಗೆ ಬೆಂಬಲ ವ್ಯಕ್ತಪಡಿಸಿದ್ದು, ಶಾಂತಿಯುತವಾಗಿ ಪ್ರತಿಭಟಿಸಲು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಇದೇ ಗುರುವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಟೂರ್ನಿಯಿಂದ ಸ್ಪಿನ್ನರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಬಿಸಿಸಿಐ ಕೈ ಬಿಟ್ಟಿದ್ದು, ವಿಶ್ರಾಂತಿ ನೀಡಿದೆ.