ಟೀಂ ಇಂಡಿಯಾದಲ್ಲಿ ಧೀರ್ಘಾವಧಿ ಇರಬೇಕಂದ್ರೆ ಸಖತ್​​ ಕಷ್ಟ ಪಡಬೇಕು. ಎಷ್ಟೋ ಜನ್ಮಗಳ ಪುಣ್ಯ ಇರಬೇಕು. ಆದ್ರೆ ಇಲ್ಲೊಬ್ಬ ಇದ್ದಾನೆ. ಈತನಿಂದ ತಂಡಕ್ಕೆ ಶೂನ್ಯ ಲಾಭವಾದ್ರೂ ತಂಡದಲ್ಲಿ ಖಾಯಂ. ಅದಕ್ಕೆ ಕಾರಣ ಅವನ ಚಾಲಾಕಿ ಬುದ್ಧಿ. ನಾಯಕ ವಿರಾಟ್​​​ ಕೊಹ್ಲಿಗೆ ಬಕೆಟ್​​ ಹಿಡಿದೇ ತಂಡದಲ್ಲಿ ಖಾಯಂ ಆಗಿದ್ದಾನೆ. ಅಷ್ಟಕ್ಕೂ ಟೀಂ ಇಂಡಿಯಾದ ಆ ಬಕೆಟ್​​​ ರಾಜ ಯಾರು ಅಂತೀರಾ..?

ಟೀಂ ಇಂಡಿಯಾದಲ್ಲಿ ಧೀರ್ಘಾವಧಿ ಇರಬೇಕಂದ್ರೆ ಸಖತ್​​ ಕಷ್ಟ ಪಡಬೇಕು. ಎಷ್ಟೋ ಜನ್ಮಗಳ ಪುಣ್ಯ ಇರಬೇಕು. ಆದ್ರೆ ಇಲ್ಲೊಬ್ಬ ಇದ್ದಾನೆ. ಈತನಿಂದ ತಂಡಕ್ಕೆ ಶೂನ್ಯ ಲಾಭವಾದ್ರೂ ತಂಡದಲ್ಲಿ ಖಾಯಂ. ಅದಕ್ಕೆ ಕಾರಣ ಅವನ ಚಾಲಾಕಿ ಬುದ್ಧಿ. ನಾಯಕ ವಿರಾಟ್​​​ ಕೊಹ್ಲಿಗೆ ಬಕೆಟ್​​ ಹಿಡಿದೇ ತಂಡದಲ್ಲಿ ಖಾಯಂ ಆಗಿದ್ದಾನೆ. ಅಷ್ಟಕ್ಕೂ ಟೀಂ ಇಂಡಿಯಾದ ಆ ಬಕೆಟ್​​​ ರಾಜ ಯಾರು ಅಂತೀರಾ..?

ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕಾದ್ರೆ ಅಥವಾ ತಂಡದೊಂದಿಗೆ ಕಾಣಿಸಿಕೊಳ್ಳಬೇಕಾದರೆ ಎಷ್ಟೋ ವರ್ಷಗಳ ಪುಣ್ಯ ಮಾಡಿರಬೇಕು ಅಂತಾರೆ. ಆದರೆ ಇಲ್ಲೊಬ್ಬ ಇದ್ದಾನೆ. ಈತನ ಪ್ರಕಾರ ತಂಡದ ನಾಯಕನಿಗೆ ಚೆನ್ನಾಗಿ ಬಕೆಟ್​​ ಇಡಿದ್ರೆ ಸಾಕು, ಆರಾಮಾಗಿ ಭಾರತ ಕ್ರಿಕೆಟ್​​ ತಂಡದಲ್ಲಿ ಖಾಯಂ ಆಗಬಹುದು ಅಂದುಕೊಂಡಿದ್ದಾನೆ. ತಮ್ಮ ಜವಾಬ್ದಾರಿಯನ್ನು ಮರೆತರೂ ಪರವಾಗಿಲ್ಲ ನಾಯಕನ ಮನಸು ಗೆದ್ದಿಬಿಟ್ಟರೆ ಸಾಕು ಅಂತ ಅಂದುಕೊಂಡುಬಿಟ್ಟಿದ್ದಾನೆ.

ಕೊಹ್ಲಿ ಆಂಡ್​​ ಟೀಂ ನಲ್ಲಿರುವ ಆ ಬಕೆಟ್​​ ರಾಜ ಯಾರು..?

ಅಷ್ಟಕ್ಕೂ ತಂಡದಲ್ಲಿರಬೇಕು ಎನ್ನುವ ಒಂದೇ ಕಾರಣಕ್ಕೆ ನಾಯಕ ವಿರಾಟ್​​​​ ಕೊಹ್ಲಿಯ ಚಾಕರಿ ಮಾಡಿಕೊಂಡು, ಕೊಹ್ಲಿಯನ್ನ ಹೊಗಳಿ ಅವರ ಪ್ರೀತಿ ಪಾತ್ರನಾಗುತ್ತಿರುವ ಆ ಮಹಾನ್​​ ಪುರುಷ ಬೇಱರು ಅಲ್ಲ ಟೀಂ ಇಂಡಿಯಾದ ಮುಖ್ಯ ಕೋಚ್​​ ರವಿ ಶಾಸ್ತ್ರಿ.

ಮಾಜಿ ಕೋಚ್​​ ಕುಂಬ್ಳೆಯಿಂದ ಪಾಠ ಕಲಿತ್ರಾ ಶಾಸ್ತ್ರಿ..?

ಕೋಚ್​​ ಅಂದ್ರೆ ಗುರುವಿದ್ದಂತೆ. ಶಿಷ್ಯ ಏನೇ ಮಾಡಿದರೂ ಅವನನ್ನ ಹೊಗಳದೆ ಇನ್ನೂ ಅಭೂತಪೂರ್ವವಾಗಿ ಆಡುವಂತೆ ಮಾಡಬೇಕಾದ ಜವಾಬ್ದಾರಿ ಗುರುವಿನದ್ದು. ಆದರೆ ಟೀಂ ಇಂಡಿಯಾದಲ್ಲಿ ಆಗಿಲ್ಲ. ಮಾಜಿ ಕೋಚ್​​ ಅನಿಲ್​ ಕುಂಬ್ಳೆ ತನ್ನ ಕಾಯಕವನ್ನ ಸರಿಯಾಗಿ ಮಾಡುತ್ತಿದ್ರೂ ಅವರಿಗೆ ಗೇಟ್​​ ಪಾಸ್​​ ಕೊಡಲಾಗಿತ್ತು. ಇದನ್ನ ಅರಿತಿರುವ ಹಾಲಿ ಕೋಚ್​​​ ರವಿಶಾಸ್ತ್ರಿ, ಕುಂಬ್ಳೆಯಿಂದ ಪಾಠ ಕಲಿತು ತಂಡದಲ್ಲಿರಬೇಕಾದರೆ ಏನು ಮಾಡಬೇಕು ಎಂದು ಅರಿತಿದ್ದಾರೆ.

ತಂಡದಲ್ಲಿ ಇರಲೇಬೇಕು, ಬಿಸಿಸಿಐ ನೀಡೋ ಕೋಟಿ ಕೋಟಿ ಹಣ ಬಾಚಲೇಬೇಕು ಎಂದು ನಿರ್ಧರಿಸಿರುವ ಶಾಸ್ತ್ರಿ ಅದಕ್ಕಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನ ಮರೆತು ನಾಯಕ ಕೊಹ್ಲಿ ಹೇಳಿದಂತೆ ಕೇಳಿಕೊಂಡು ಅವರಿಗೆ ಬಕೆಟ್​​ ಹಿಡಿಯುತ್ತಾ ಬಹಿರಂಗವಾಗಿ ಕೊಹ್ಲಿಯನ್ನು ಹೊಗಳುತ್ತಾ ಟೈಂ ಪಾಸ್​​ ಮಾಡುತ್ತಾರೆ.

ಈಗಿರುವ ಟೀಂ ಇಂಡಿಯಾನೇ ಬೆಸ್ಟ್​​ ಅಂತೆ..!: ಭಾರತದ ಕ್ರಿಕೆಟ್​​​ ಇತಿಹಾಸವನ್ನೇ ಮರೆತುಬಿಟ್ರಾ ಶಾಸ್ತ್ರಿ..?

ಇದು ಟೀಂ ಇಂಡಿಯಾವನ್ನ ದಶಕಗಳ ಹಿಂದೆ ಪ್ರತಿನಿಧಿಸಿದ್ದ ಆಟಗಾರನ ಮಾತು. ಕಳೆದ 100 ವರ್ಷಗಳಿಂದ ಭಾರತದ ಕ್ರಿಕೆಟ್​​ಗಾಗಿ ಬೆವರು ಹರಿಸಿದ್ದನ್ನೇ ಮರೆತು ತಂಡದಲ್ಲಿನ ಸ್ಥಾನಕ್ಕಾಗಿ ಭಾರತದ ಕ್ರಿಕೆಟ್​​ ಹಿಸ್ಟರಿಯಲ್ಲಿ ಈಗಿನ ತಂಡವೇ ಬೆಸ್ಟ್​ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಕೊಹ್ಲಿಯೇ ಟೀಂ ಇಂಡಿಯಾ ಬಾಸ್​​ ಅಂತೆ..!

ಕೇವಲ ಸದ್ಯದ ಟೀಂ ಇಂಡಿಯಾ ಬೆಸ್ಟ್​​ ಅನ್ನುವುದಲ್ಲದೇ ಕೊಹ್ಲಿಯೇ ಟೀಂ ಇಂಡಿಯಾದ ಬಾಸ್​​ ಎಂದು ಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ತಂಡದಲ್ಲಿ ಉಳಿದವರೆಲ್ಲಾ ಅವರ ಸೇವಕರು ಎಂದು ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಇಂಥಹ ಪರಿಸ್ಥಿತಿ ಟೀಂ ಇಂಡಿಯಾದ ಕೋಚ್​​ ಎನ್ನಿಸಿಕೊಂಡಿರುವ ರವಿಶಾಸ್ತ್ರಿಗೆ ಬರಬಾರದಿತ್ತು ಕಣ್ರಿ. ಕೇವಲ ತಂಡದಲ್ಲಿರಬೇಕು ಅನ್ನುವ ಕಾರಣಕ್ಕೆ ತನ್ನ ಆತ್ಮಸಾಕ್ಷಿಯನ್ನೇ ಬಲಿಕೊಟ್ಟು ಬಾಯಿಗೆ ಬಂದಂತೆ ಮಾತ್ತನ್ನಾಡುತ್ತಿರುವ ಶಾಸ್ತ್ರಿಯ ಬುದ್ಧಿಗೆ ಏನ್​ ಹೇಳಬೇಕೋ ಗೊತ್ತಾಗುತ್ತಿಲ್ಲ. ಶಾಸ್ತ್ರಿಯ ಈ ನಡೆಯನ್ನ ಅವರ ಜಾಣ್ಮೆ ಅನ್ನಬೇಕೋ ಅಥವಾ ಮುರ್ಖತನ ಅನ್ನಬೇಕೋ ಗೊತ್ತಾಗುತ್ತಿಲ್ಲ.