ನಾಯಕ ವಿರಾಟ್ ಕೊಹ್ಲಿ ಔಟ್-ಸಂಕಷ್ಟದಲ್ಲಿ ಟೀಂ ಇಂಡಿಯಾ

First Published 17, Jul 2018, 7:13 PM IST
Rashid Stuns India As Kohli Falls For 71 vs England
Highlights

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ದಿಢೀರ್ ವಿಕೆಟ್ ಕಳೆದುಕೊಂಡ ಆತಂಕಕ್ಕೆ ಸಿಲುಕಿದೆ. ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ  ಹಾಗೂ ಸುರೇಶ್ ರೈನಾ ವಿಕೆಟ್ ಪತನದೊಂದಿಗೆ ಭಾರತ 5ನೇ ವಿಕೆಟ್ ಕಳೆದುಕೊಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಲೀಡ್ಸ್(ಜು.17): ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾಗೆ ಆಸರೆಯಾಗಿದ್ದ ನಾಯಕ ವಿರಾಟ್ ಕೊಹ್ಲಿ 71 ರನ್ ಸಿಡಿಸಿ ಔಟಾಗಿದ್ದಾರೆ.

ದಿಢೀರ್ ವಿಕೆಟ್ ಪತನದೊಂದಿಗೆ ಕಂಗಾಲಾಗಿದ್ದ ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ ಸಮಾಧಾನ ತಂದಿತ್ತು. ಆದರೆ ಕೊಹ್ಲಿ 71 ರನ್ ಸಿಡಿಸಿ, ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು.

156 ರನ್‌ಗಳಿಗೆ ಭಾರತ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. 3ನೇ ಏಕದಿನ ಪಂದ್ಯದಲ್ಲೂ ಸುರೇಶ್ ರೈನಾ ಫಾರ್ಮ್‌ಗೆ ಮರಳಲಿಲ್ಲ. ರೈನಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದೆ. ಇಂಗ್ಲೆಂಡ್  ವಿರುದ್ಧದ  3 ಏಕದಿನ ಪಂದ್ಯದ ಸರಣಿಯ 1-1 ಅಂತರದಲ್ಲಿ ಸಮಭಲಗೊಂಡಿದೆ. ಹೀಗಾಗಿ ಇಂದಿನ ಪಂದ್ಯ ಸರಣಿಯನ್ನ ನಿರ್ಧರಿಸಲಿದೆ. 


 

loader