ಲಾಯ್ಡ್ಸ್‌ ತಂಡವನ್ನು ಪ್ರತಿನಿಧಿಸಿದ್ದ ವರುಣ್ ಬಲಗೈ ವೇಗದ ಬೌಲರ್ ಆಗಿದ್ದು ಎದುರಾಳಿ ತಂಡದ 10 ವಿಕೆಟ್'ಗಳನ್ನು 8 ಓವರ್'ಗಳಲ್ಲಿ 36 ರನ್ ನೀಡಿ ಕಬಳಿಸಿದ್ದಾನೆ. ಔಟ್ ಮಾಡಿದ 10 ವಿಕೆಟ್'ಗಳಲ್ಲಿ ಐವರು ಬೌಲ್ಡ್, ಇಬ್ಬರು ಎಲ್'ಬಿ ಉಳಿದ ಮೂವರು ಬ್ಯಾಟ್ಸ್‌ಮನ್‌ಗಳು ಕ್ಯಾಚ್‌ ನೀಡುವ ಮೂಲಕ ಪೆವಿಲಿಯನ್'ಗೆ ತೆರಳಿದ್ದಾರೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿರುವುದು ಮತ್ತೊಂದು ವಿಶೇಷ.
ಬೆಂಗಳೂರು(ಜೂ.24): ಯುವ ಕ್ರಿಕೆಟಿಗನೊಬ್ಬ ಭಾರತದ ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾನೆ. ಕೆಎಸ್ಸಿಎ ಆಯೋಜಿಸಿದ್ದ ರಾಯಚೂರು ವಲಯದ 3ನೇ ವಲಯ ಕ್ರಿಕೆಟ್ ಟೂರ್ನಿಯ ಒಂದೇ ಪಂದ್ಯದಲ್ಲಿ ವರುಣ್ ಸೋರಗಾವಿ ಎಂಬಾತ ಎಲ್ಲಾ ಹತ್ತು ವಿಕೆಟ್ಗಳನ್ನು ಉರುಳಿಸಿದ್ದಾನೆ. ಈ ಸಾಧನೆ ಮೂಡಿ ಬಂದಿದ್ದು ಬಾಗಲಕೋಟೆಯ ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್ ಮತ್ತು ಗುಳೇದಗುಡ್ಡ ಕ್ಲಬ್ ನಡುವಣ ಪಂದ್ಯದಲ್ಲಿ.
ಲಾಯ್ಡ್ಸ್ ತಂಡವನ್ನು ಪ್ರತಿನಿಧಿಸಿದ್ದ ವರುಣ್ ಬಲಗೈ ವೇಗದ ಬೌಲರ್ ಆಗಿದ್ದು ಎದುರಾಳಿ ತಂಡದ 10 ವಿಕೆಟ್'ಗಳನ್ನು 8 ಓವರ್'ಗಳಲ್ಲಿ 36 ರನ್ ನೀಡಿ ಕಬಳಿಸಿದ್ದಾನೆ. ಔಟ್ ಮಾಡಿದ 10 ವಿಕೆಟ್'ಗಳಲ್ಲಿ ಐವರು ಬೌಲ್ಡ್, ಇಬ್ಬರು ಎಲ್'ಬಿ ಉಳಿದ ಮೂವರು ಬ್ಯಾಟ್ಸ್ಮನ್ಗಳು ಕ್ಯಾಚ್ ನೀಡುವ ಮೂಲಕ ಪೆವಿಲಿಯನ್'ಗೆ ತೆರಳಿದ್ದಾರೆ. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಕೂಡ ಪಡೆದಿರುವುದು ಮತ್ತೊಂದು ವಿಶೇಷ.
ಬಾಗಲಕೋಟೆ ತಾಲ್ಲೂಕು ಮುಗಳೊಳ್ಳಿಯ ಶ್ರೀಶೈಲ ಸೋರಗಾವಿ ಹಾಗೂ ವೀಣಾ ದಂಪತಿಯ ಪುತ್ರ ವರುಣ್ ಬೆಂಗಳೂರಿನ ಯಲಹಂಕದ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2010ರಲ್ಲಿ ಸೇಂಟ್ಆ್ಯನ್ಸ್ ಶಾಲೆಯಲ್ಲಿ ಓದುತ್ತಿದ್ದಾಗ 16 ವರ್ಷದ ಒಳಗಿನವರ ರಾಷ್ಟ್ರೀಯ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ನೂತನ ದಾಖಲೆ
ವಲಯ ಕ್ರಿಕೆಟ್ ಮತ್ತು ರಾಜ್ಯ ಟೂರ್ನಿಗಳ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಬೌಲರ್ ಒಬ್ಬ 10 ವಿಕೆಟ್ಗಳನ್ನು ಕಬಳಿಸಿರುವುದು ಇದೇ ಮೊದಲಾಗಿದೆ. ಇದನ್ನು ಕೆಎಸ್ಸಿಇ ಕೂಡ ಸ್ಪಷ್ಟ ಪಡಿಸಿದೆ. ಅನಿಲ್ ಕುಂಬ್ಳೆ ಅವರು 1999ರಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 74 ರನ್'ಗಳಿಗೆ 10 ವಿಕೆಟ್ ಕಿತ್ತಿದ್ದರು.
ಸ್ಕೋರ್
ಗುಳೇದಗುಡ್ಡ ಕ್ರಿಕೆಟ್ ಕ್ಲಬ್ 15 ಓವರ್ಗಳಲ್ಲಿ 70. ಬಾಗಲಕೋಟೆಯ ಲಾಯ್ಡ್ಸ್ ಸ್ಪೋರ್ಟ್ಸ್ ಫೌಂಡೇಷನ್ 9 ಓವರ್ಗಳಲ್ಲಿ 2ಕ್ಕೆ71.
ಫಲಿತಾಂಶ: ಲಾಯ್ಡ್ಸ್ ಸ್ಪೋರ್ಟ್ಸ್ ತಂಡಕ್ಕೆ 8 ವಿಕೆಟ್ ಗೆಲುವು
