ಯಾವಾಗ ಬಿಡುಗಡೆಯಾಗುತ್ತೆ ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರ?

Ranveer Singh Starrer 1983 Reveals Its Releasing Date
Highlights

ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಕಾರ್ಯ ಆರಂಭವಾಗಿದೆಯಾ? ಇಂತಹಲ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮುಂಬೈ(ಜು.05): ಎಂ ಎಸ್ ಧೋನಿ ಜೀವನಾಧಾರಿತ ಎಂ ಎಸ್ ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಭಾರತೀಯ ಚಿತ್ರರಂಗದಲ್ಲಿ ಭಾರಿ ಜನಪ್ರೀಯವಾಗಿತ್ತು. ಭಾರತಕ್ಕೆ 2ನೇ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕನ ಆತ್ಮಚರಿತ್ರೆ ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದರು. ಇದೀಗ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಕಪಿಲ್ ದೇವ್ ಚಿತ್ರ ಸೆಟ್ಟೇರಿ ಹಲವು ದಿನಗಳು ಉರುಳಿವೆ.

1983ರಲ್ಲಿ ಕಪಿಲ್ ದೇವ್ ನಾಯಕತ್ವದವ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆದ್ದು ದಾಖಲೆ ಬರೆದಿತ್ತು. ಈ ಎಲ್ಲಾ ಅಂಶಗಳನ್ನೊಳಗೊಂಡ 1983ರ ವಿಶ್ವಕಪ್ ಚಿತ್ರ ಬಿಡುಗಡೆಗೆ ಬಿಟೌನ್ ಸಜ್ಜಾಗಿದೆ.  ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

1983ರ ವಿಶ್ವಕಪ್ ಚಿತ್ರದ ಚಿತ್ರತಂಡ ಪ್ರಾಥಮಿಕ ಕಾರ್ಯದಲ್ಲಿ ಬ್ಯೂಸಿಯಾಗಿದೆ. ಇದೀಗ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಅನ್ನೋದ ಬಹಿರಂಗವಾಗಿದೆ. 1983ರ ವಿಶ್ವಕಪ್ ಚಿತ್ರ ಎಪ್ರಿಲ್ 10,, 2020ರಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿವೆ. 

ಮಹತ್ವದ ಚಿತ್ರ ಪೂರ್ತಿಗೊಳಿಸಲು 2 ವರ್ಷಗಳ ಕಾಲಾವಕಾಶ ಬೇಕಿದೆ. 1983ರ ಕಾಲಘಟ್ಟ ಚಿತ್ರೀಕರಣಕ್ಕೆ ಸೆಟ್‌ಗಳನ್ನ ಹಾಕಬೇಕಿದೆ. ಹಳೇ ಕಾಲದ ನೆನಪುಗಳನ್ನ ತೆರೆ ಮೇಲೆ ತರಲು 2 ವರ್ಷಗಳು ಕಾಲಾವಕಾಶ ಬೇಕಿದೆ ಎಂದು ಚಿತ್ರ ತಂಡ ಹೇಳಿದೆ.

loader