Asianet Suvarna News Asianet Suvarna News

ರಣಜಿ ಟ್ರೋಫಿ: ಗುಜರಾತ್ ಮೇಲೆ ಕರ್ನಾಟಕ ಸವಾರಿ

ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್‌ವಾಲ್ ಮತ್ತು ಡಿ. ನಿಶ್ಚಲ್ ದೊಡ್ಡ ಮೊತ್ತ ಸೇರಿಸುವ ಉತ್ಸಾಹದಲ್ಲಿದ್ದರು. ವೇಗದ ಬ್ಯಾಟಿಂಗ್‌ಗೆ ಮೊರೆ ಹೋದ ಮಯಾಂಕ್ 36 ಎಸೆತಗಳಲ್ಲಿ 4 ಬೌಂಡರಿ ಸಹಿತ 25ರನ್ ಗಳಿಸಿ ಔಟಾದರು. ನಿಶ್ಚಲ್ (12) ಚಾವ್ಲಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಎರಡು ವಿಕೆಟ್‌ಗಳು ಕೇವಲ 6 ರನ್‌ಗಳ ಅಂತರದಲ್ಲಿ ಬಿದ್ದವು.

Ranji Trophy Karnataka Commendable position over Gujarat
Author
Surat, First Published Dec 15, 2018, 9:26 AM IST

ಸೂರತ್(ಡಿ.15): ಐವರು ಬೌಲರ್‌ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಕರ್ನಾಟಕ, ಇಲ್ಲಿ ಶುಕ್ರವಾರದಿಂದ ಆರಂಭವಾಗಿರುವ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದೆ.

ರಾಜ್ಯದ ಐವರು ಬೌಲರ್‌ಗಳು ತಲಾ 2 ವಿಕೆಟ್ ಪಡೆದು, ಎದುರಾಳಿ ಗುಜರಾತ್ ತಂಡವನ್ನು ಕಟ್ಟಿಹಾಕಿದರು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್, ನಾಯಕ ಪ್ರಿಯಾಂಕ್ ಪಂಚಾಲ್ (74) ರನ್‌ಗಳ ಹೊರತಾಗಿಯೂ ಮೊದಲ ಇನಿಂಗ್ಸ್‌ನಲ್ಲಿ 216 ರನ್‌ಗಳಿಗೆ ಆಲೌಟ್ ಆಗಿದೆ. ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 45 ರನ್‌ಗಳಿಸಿದೆ. ಇನ್ನೂ 171 ರನ್‌ಗಳ ಹಿನ್ನಡೆಯಲ್ಲಿದೆ. ಭರವಸೆ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ (7) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

6 ರನ್ ಅಂತರದಲ್ಲಿ 2 ವಿಕೆಟ್: ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್‌ವಾಲ್ ಮತ್ತು ಡಿ. ನಿಶ್ಚಲ್ ದೊಡ್ಡ ಮೊತ್ತ ಸೇರಿಸುವ ಉತ್ಸಾಹದಲ್ಲಿದ್ದರು. ವೇಗದ ಬ್ಯಾಟಿಂಗ್‌ಗೆ ಮೊರೆ ಹೋದ ಮಯಾಂಕ್ 36 ಎಸೆತಗಳಲ್ಲಿ 4 ಬೌಂಡರಿ ಸಹಿತ 25ರನ್ ಗಳಿಸಿ ಔಟಾದರು. ನಿಶ್ಚಲ್ (12) ಚಾವ್ಲಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಎರಡು ವಿಕೆಟ್‌ಗಳು ಕೇವಲ 6 ರನ್‌ಗಳ ಅಂತರದಲ್ಲಿ ಬಿದ್ದವು.

ಪಂಚಾಲ್ ಅರ್ಧಶತಕದ ಆಸರೆ: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕತನ್ (13)ರನ್ನು ಗೌತಮ್ ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ನಾಯಕ ಪ್ರಿಯಾಂಕ್ ಪಂಚಾಲ್(74), ಏಕಾಂಗಿ ಹೋರಾಟ ನಡೆಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಿದರು. ಅವರನ್ನು ಶ್ರೇಯಸ್ ಗೋಪಾಲ್ ಬೌಲ್ಡ್ ಮಾಡಿದರು. ಭಾರ್ಗವ್ (4), ರುಜುಲ್ (12), ಜುನೇಜಾ (15), ಅಕ್ಷರ್ ಪಟೇಲ್ (3), ಧೃವ್ ರಾವಲ್(13), ರೂಶ್ ಕಲಾರಿಯಾ(4) ವೈಫಲ್ಯ ಅನುಭವಿಸಿದರು. ಆದರೆ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳಾದ ಪಿಯುಶ್ ಚಾವ್ಲಾ (34) ಮತ್ತು ಮೆಹುಲ್ ಪಟೇಲ್ ಅಜೇಯ 31 ರನ್‌ಗಳಿಸಿದ್ದರಿಂದ ಗುಜರಾತ್ 200ರ ಗಡಿ ದಾಟಿತು. ಚಾವ್ಲಾರನ್ನು ವಿನಯ್ ಔಟ್ ಮಾಡಿದರು. ಅಂತಿಮವಾಗಿ ಗುಜರಾತ್ 216 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಪರ ವಿನಯ್ ಕುಮಾರ್, ಪ್ರತೀಕ್ ಜೈನ್, ರೋನಿತ್ ಮೋರೆ, ಕೆ. ಗೌತಮ್, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಗುಜರಾತ್ 216/10,
ಕರ್ನಾಟಕ 45/2

Follow Us:
Download App:
  • android
  • ios